ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಕರ ವಸೂಲಿಗೆ ಮುಂದಾದ ಪುರಸಭೆ

Published 23 ನವೆಂಬರ್ 2023, 15:34 IST
Last Updated 23 ನವೆಂಬರ್ 2023, 15:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪುರಸಭೆಗೆ ಬರಬೇಕಾದ ಕರ ವಸೂಲಿಗೆ ಇಲ್ಲಿನ ಪುರಸಭೆ ಸಿಬ್ಬಂದಿ ಮುಂದಾಗಿದ್ದಾರೆ. ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ನೇತೃತ್ವದಲ್ಲಿ ಸಿಬ್ಬಂದಿ ಕರವಸೂಲಿ ಮಾಡುತ್ತಿದ್ದಾರೆ. ಕರ ತುಂಬದೆ ಬಾಕಿ ಉಳಿಸಿಕೊಂಡವರ ಮನೆ, ಅಂಗಡಿ, ಫ್ಯಾಕ್ಟರಿಗಳಿಗೆ ಸಿಬ್ಬಂದಿ ಭೇಟಿ ನೀಡುತ್ತಿದ್ದಾರೆ.

‘ಜಿನ್ನಿಂಗ್ ಫ್ಯಾಕ್ಟರಿ, ಶೇಂಗಾ ಮಿಲ್, ಎಪಿಎಂಸಿ ಉಗ್ರಾಣ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನಿವಾಸಗಳು, ಪ್ರವಾಸಿ ಮಂದಿರ, ಕೆಎಸ್‍ಆರ್‌ಟಿಸಿ ಸಿಬ್ಬಂದಿ ನಿವಾಸಗಳು, ಕಲ್ಯಾಣ ಮಂಟಪಗಳು ಸೇರಿದಂತೆ ಮತ್ತಿತರ ಮೂಲಗಳಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಕರ ಬರಬೇಕಾಗಿದೆ. ಇದಕ್ಕಾಗಿ ಸಿಬ್ಬಂದಿ ಪ್ರತಿದಿನ ಸಂಬಂಧಿಸಿದವರನ್ನು ಭೇಟಿ ಆಗುತ್ತಿದ್ದಾರೆ. ಕಾರಣ ಎಲ್ಲರೂ ಸರಿಯಾದ ಸಮಯಕ್ಕೆ ಸರಿಯಾಗಿ ಕರ ತುಂಬಿ ಊರಿನ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT