ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸುತ್ತಿರುವ ಕಪ್ಪತ್ತಗುಡ್ಡದ ನಂದಿವೇರಿಮಠ

Published 14 ಜನವರಿ 2024, 8:10 IST
Last Updated 14 ಜನವರಿ 2024, 8:10 IST
ಅಕ್ಷರ ಗಾತ್ರ

ಡಂಬಳ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ನಂದಿಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುತ್ತಿರುವುದು ವಿಶೇಷತೆಗಳಲ್ಲಿ ಒಂದಾಗಿದೆ.

ಪರಿಸರ ಉತ್ಸವ, ಪರಿಸರ ಸಂರಕ್ಷಣೆ, ಸಂವರ್ಧನ, ಸಂಶೋಧನೆ ಮತ್ತು ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಸಿಗಳನ್ನು ನೀಡಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ.

ಕಪ್ಪತ್ತಗುಡ್ಡ ನಂದಿವೇರಿ ಸಂಸ್ಥಾನಮಠ ಡೋಣಿ ಮತ್ತು ಗದಗ ಮಠ ಸ್ಥಾಪನೆಯಾಗಿ 300 ವರ್ಷಗಳಾಗಿದ್ದು, ಕಪ್ಪತ್ತಗುಡ್ಡದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವು ನಡೆಯುತ್ತಿದೆ. ಗುಡ್ಡದಲ್ಲಿರುವ ಗಿಡಮೂಲಿಕೆಗಳನ್ನು ದೇವರಿಗೆ ದೂಪದ ರೀತಿಯಲ್ಲಿ ಬಳಕೆ ಮಾಡುತ್ತಿರುವ ಭಕ್ತರಿಗೆ ಸಸಿಗಳನ್ನು ವಿತರಿಸಿ ಗುಡದ ತಪ್ಪಲುಗಳನ್ನು ಕೀಳದಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಶಾಲೆ–ಕಾಲೇಜು ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳ ಸಹಯೋಗದಲ್ಲಿ ಆಗಮಿಸಿದ ಭಕ್ತರಿಗೆ ಪರಿಸರ ಉತ್ಸವದ ಮಹತ್ವದ ತಿಳಿಸಲಾಗುತ್ತಿದೆ.

ಕಪ್ಪತ್ತಗುಡ್ಡ ನಂದಿವೇರಿ ಸಂಸ್ಥಾನಮಠದ ಕರ್ತೃ ನಂದಿವೇರಿ ಬಸವಣ್ಣ ಶಿವನ ವಾಹನವಾಗಿದ್ದು, ಕೈಲಾಸದಿಂದ ಶಿವ–ಪಾರ್ವತಿಯರು ಈ ನಂದಿ ಮೂಲಕ ಕಪ್ಪತ್ತಗುಡ್ಡದ ನಂದಿವೇರಿ ಮಠಕ್ಕೆ ಆಗಮಿಸಿ ನೆಲೆಸಿದ್ದಾರೆ. ಕರ್ತೃ ನಂದಿವೇರಿ ಬಸವಣ್ಣ ಶಿವನ ಪರಿವಾರವೇ ಆಗಿರುವುದರಿಂದ ಶಿವನ ಜೊತೆಗೆ ಪಾರ್ವತಿ ಮತ್ತು ದೇವಾನು ದೇವತೆಗಳು ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠಕ್ಕೆ ಆಗಮಿಸಿದ ಸ್ಥಳವಾಗಿದೆ ಎಂದು ಪುರಾಣದಿಂದ ತಿಳಿದು ಬರುತ್ತದೆ ಎಂದು ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.

ದೇವಲೋಕದಿಂದ ಆಗಮಿಸಿದ ಶಿವ–ಪಾರ್ವತಿಯರು ಮಲ್ಲಿಕಾರ್ಜುನ ಮತ್ತು ಭ್ರಮರಾಂಭೆಯರಾಗಿ ಕಪ್ಪತ್ತಗುಡ್ಡದಲ್ಲಿ ಪೂಜೆಗೊಳ್ಳುತ್ತಿರುವುದು ವಿಶೇಷವಾಗಿದೆ. ಶಿವನ ಪರಿವಾರವೇ ಆದ ಸತ್ಯಮ್ಮದೇವಿ, ಮಲಿಯಮ್ಮದೇವಿ ದೇವಸ್ಥಾನಗಳು ಈಗಲೂ ನಂದಿವೇರಿ ಸಂಸ್ಥಾನಮಠದ ಹತ್ತಿರದಲ್ಲಿ ಇವೆ. ಭಕ್ತರ ಉದ್ಧಾರಕ್ಕಾಗಿ ಮಲಿಯಮ್ಮದೇವಿ ಹೈತಾಪುರದಲ್ಲಿ ಮತ್ತು ಭಕ್ತರ ಅನುಗ್ರಹಕ್ಕಾಗಿ ಸತ್ಯಮ್ಮದೇವಿ ಗದಗ ಸಮೀಪದ ಹಾತಲಗೇರಿಯಲ್ಲಿ ನೆಲೆಸಿದ್ದಾಳೆ ಎನ್ನುವ ಮಾಹಿತಿ ಇತಿಹಾಸದ ಪುಟಗಳಲ್ಲಿ ಉಲ್ಲೇಖ ಇದೆ.

ಶಿವಕುಮಾರ ಸ್ವಾಮೀಜಿ
ಶಿವಕುಮಾರ ಸ್ವಾಮೀಜಿ
ಕಪ್ಪತ್ತಗುಡ್ಡದ ನಂದಿಬಸವೇಶ್ವರ ಮೂರ್ತಿ
ಕಪ್ಪತ್ತಗುಡ್ಡದ ನಂದಿಬಸವೇಶ್ವರ ಮೂರ್ತಿ
ಡಂಬಳ ಹೈತಾಪುರ ಹಾತಲಗೇರಿ ಹಳ್ಳಿಕೇರಿ ಹಳ್ಳಿಗುಡಿ ಜಂತಲಿಶಿರೂರ ತಿಮ್ಮಾಪುರ ಸುತ್ತಲಿನ ಗ್ರಾಮಗಳಿಂದ ದೇವರ ಪಲ್ಲಕ್ಕಿಗಳು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಮಠಕ್ಕೆ ಆಗಮಿಸಿ ಆಶೀರ್ವಾದ ಪಡೆಯುತ್ತವೆ
ಮುತ್ತಣ್ಣ ಕೊಂತಿಕಲ್ ಡಂಬಳ ಗ್ರಾಮದ ಕಪ್ಪತ್ತಮಲ್ಲೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT