ಮುಂಡರಗಿ: ‘ನ್ಯಾನೊ ರಸಗೊಬ್ಬರ ಪರಿಸರ ಸ್ನೇಹಿಯಾಗಿದ್ದು, ಅದನ್ನು ಬಳಸುವ ಮೂಲಕ ರೈತರು ರಸಗೊಬ್ಬರ ಬಳಕೆಯನ್ನು ಶೇ.50ರಷ್ಟು ಕಡಿಮೆ ಮಾಡಬಹುದು. ಇದರಿಂದ ಬೆಳೆಯ ಗುಣಮಟ್ಟ ಹಾಗೂ ಇಳುವರಿ ಹೆಚ್ಚಿಸಬಹುದು’ ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ.ಜಿ.ಎಸ್. ತಿಳಿಸಿದರು.

ತಾಲ್ಲೂಕಿನ ಹೆಸರೂರ ಗ್ರಾಮದ ಶರಣಪ್ಪ ಚನ್ನಳ್ಳಿ ಅವರ ಜಮೀನಿನಲ್ಲಿ ಮಂಗಳವಾರ ಏರ್ಪಡಿಸಿದ್ದ ನ್ಯಾನೊ ಯೂರಿಯಾ ಸಿಂಪಡನೆ ಪ್ರಾತ್ಯಕ್ಷಿಕೆ ಹಾಗೂ ರೈತರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ನ್ಯಾನೊ ಬಳಕೆಯ ಮೂಲಕ ರೈತರು ಮಣ್ಣು ಮತ್ತು ವಾತಾವರಣ ವೈಪರಿತ್ಯದ ದುಷ್ಪರಿಣಾಮ ತಡೆಯಬಹುದು. ಒಂದು ಚೀಲ ಯೂರಿಯಾ ರಸಗೊಬ್ಬರವು 500ಮಿ.ಲೀ. ನ್ಯಾನೊ ಯೂರಿಯಾ ದ್ರಾವಣಕ್ಕೆ ಸಮಾನವಾಗಿದ್ದು, ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಬಹುದಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ರೈತರು ಯೂರಿಯಾ ರಸಗೊಬ್ಬರವನ್ನು ಬಳಸುತ್ತಿರುವುದರಿಂದ ಮಾನವನ ಆರೋಗ್ಯ, ಮಣ್ಣಿನ ಆರೋಗ್ಯ ಹಾಗೂ ಪರಿಸರದ ಮೇಲೆ ಅದು ವಿಪರೀತ ದುಷ್ಪರಿಣಾಮ ಬೀರುತ್ತಲಿದೆ. ಆದ್ದರಿಂದ ರೈತರು ನ್ಯಾನೊ ಯೂರಿಯಾವನ್ನು ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಕಾರ್ಮಿಕರ ಕೊರತೆಯಿಂದ ರೈತರಿಗೆ ಸಕಾಲದಲ್ಲಿ ಔಷಧ ಮತ್ತು ರಸಗೊಬ್ಬರ ಸಿಂಪಡನೆ ತಡವಾಗುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಹಾಗೂ ಲಾಭಗಳಿಸಬಹುದಾಗಿದೆ. ಡ್ರೋನ್ ಮೂಲಕ ನ್ಯಾನೊ ಯೂರಿಯಾ ಸಿಂಪಡನೆ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಗುಡದಪ್ಪ ಲಿಂಗಶಟ್ಟ ಅವರು ನಿರೂಪಿಸಿ, ವಂದಿಸಿದರು. ಮುಂಡರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿರೇಶ ಸೋಪ್ಪಿನ, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ, ರೈತರಾದ ಗರುಡಪ್ಪ ಜಂತ್ಲಿ, ವಿರೇಶ ಶಾಸ್ರೀಮಠ, ಪರಸಪ್ಪ ಒಬಿನಾಯ್ಕರ, ರಾಮಕೃಷ್ಣ ಚಿಗರಿ, ಮದುಕೇಶ ಬಿಡನಾಳ, ಅಶೋಕ ತಂಟ್ರಿ, ರುದ್ರೇಶ ಹುಬ್ಬಳ್ಳಿ, ಅಜ್ಜಪ್ಪ ಲಿಂಬಿಕಾಯಿ, ಸಿದ್ದಣ್ಣ ತಳಕಲ್, ಭೀಮಪ್ಪ ಸುಗ್ಗಳ್ಳಿ, ಮಂಜುನಾಥ ಗೌಡರ, ಕೃಷಿ ಸಖಿಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.