ನರೇಗಲ್: ಪಟ್ಟಣದ ಹೊಸ ಬಸ್ ನಿಲ್ದಾಣದ ಹಿಂದುಗಡೆ ಡಬಲ್ ರಸ್ತೆಯಲ್ಲಿ, ದುರ್ಗಾ ಹೊಟೆಲ್ ಹಾಗೂ ಅದರ ಸುತ್ತಲೂ ಖಾಸಗಿ ವಾಹನಗಳನ್ನು ರಸ್ತೆಯಲ್ಲಿಯೇ ಮತ್ತು ಪಟ್ಟಣದ ಬಸ್ ನಿಲ್ದಾಣದಿಂದ ಗಜೇಂದ್ರಗಡ ಕಡೆಗೆ ಹೋಗುವಾಗ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿರುವ ಕಾರಣ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅದರಲ್ಲೂ ವಿಂಡ್ ಕಂಪನಿಯ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಪಾರ್ಕಿಂಗ್ ಸಮಸ್ಯೆ ದಿನವೂ ಹೆಚ್ಚುತ್ತಿದೆ. ಡಬಲ್ ರಸ್ತೆಯಲ್ಲಿ ಡಿವೈಡರ್ ಹಾಕಿರುವ ಕಾರಣ ಅಲ್ಲಿನ ತಿರುವಿನಲ್ಲಿ ಹಾಗೂ ಬಸ್ ನಿಲ್ದಾಣದ ಹಿಂದುಗಡೆ ರಸ್ತೆಯು ಕಿರಿದಾಗಿದೆ. ಆದ್ದರಿಂದ ಯಾವುದಾದರು ಒಂದು ಕಾರು ನಿಂತರು ಇತರೆ ವಾಹನಗಳು ಸಂಚರಿಸದ ವಾತಾವರಣ ನಿರ್ಮಾಣವಾಗುತ್ತದೆ.

ಅಲ್ಲಿನ ಎಟಿಎಂ, ದುರ್ಗಾ ಹೊಟೆಲ್ ಹಾಗೂ ಪಕ್ಕದ ಇತರೆ ಅಂಗಡಿಗಳ ಎದುರು ಬೈಕ್ಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಗದಗ ಕಡೆಯಿಂದ ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡುವಾಗ ಕೆಎಸ್ಆರ್ಟಿಸಿ ಬಸ್ಗಳಿಗೆ ತುಂಬಾ ತೊಂದರೆಯಾಗುತ್ತದೆ.

‘ಬಸ್ ಚಾಲಕ ಸ್ವಲ್ಪ ಯಾಮಾರಿದರು ಹತ್ತಾರು ವಾಹನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಸ್ ನಿಲ್ದಾಣದ ಹಿಂದುಗಡೆ ಪಾರ್ಕಿಂಗ್ ಸೌಲಭ್ಯಕ್ಕೆ ವ್ಯವಸ್ಥೆ ಮಾಡಬೇಕು, ರಸ್ತೆ ವಿಭಾಜಕವನ್ನು ಅನ್ನು ತೆರವುಗೊಳಿಸಬೇಕು ಮತ್ತು ವಾಹನದ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ಮಂಜುನಾಥ ಕಮ್ಮಾರ, ಹನಮಂತಪ್ಪ ಕಮತಗಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.