ಸೋಮವಾರ, 2 ಮಾರ್ಚ್ 2026
×
ADVERTISEMENT

ನರಗುಂದ| ‘ಆಸರೆ’ಯಾಗದ ಮನೆಗಳು; ಸೌಲಭ್ಯಕ್ಕಾಗಿ ಪರದಾಟ

ನರಗುಂದ ಪಟ್ಟಣದ ಎಸ್‌.ಎಂ.ಕೃಷ್ಣ ನಗರದಲ್ಲಿ ನಿಲ್ಲದ ಅತಿಕ್ರಮಣ: ಕ್ರಮವಹಿಸದ ಆಡಳಿತ
Published : 2 ಮಾರ್ಚ್ 2026, 7:05 IST
Last Updated : 2 ಮಾರ್ಚ್ 2026, 7:05 IST
ADVERTISEMENT
ಫಾಲೋ ಮಾಡಿ
Comments
ನರಗುಂದದ ಆಸರೆ ಮನೆಗಳ ಬಡಾವಣೆ ಎಸ್.ಎಂ.ಕೃಷ್ಣ ನಗರದ ಸಮೀಪದ ಐತಿಹಾಸಿಕ ಗುಡ್ಡದ ಪ್ರದೇಶ ಅತಿಕ್ರಮಣಗೊಂಡು ಮನೆಗಳು ಶೆಡ್‌ಗಳು ನಿರ್ಮಾಣಗೊಳ್ಳುತ್ತಿರುವ ದೃಶ್ಯ
ನರಗುಂದದ ಆಸರೆ ಮನೆಗಳ ಬಡಾವಣೆ ಎಸ್.ಎಂ.ಕೃಷ್ಣ ನಗರದ ಸಮೀಪದ ಐತಿಹಾಸಿಕ ಗುಡ್ಡದ ಪ್ರದೇಶ ಅತಿಕ್ರಮಣಗೊಂಡು ಮನೆಗಳು ಶೆಡ್‌ಗಳು ನಿರ್ಮಾಣಗೊಳ್ಳುತ್ತಿರುವ ದೃಶ್ಯ
ಶೌಚಾಲಯ ನಿರ್ಮಿಸಿ ಎಸ್‌.ಎಂ.ಕೃಷ್ಣ ನಗರದಲ್ಲಿ ಮಹಿಳೆಯರು ಶೌಚಾಲಯವಿಲ್ಲದೇ ಪರದಾಡಬೇಕಿದೆ. ಮೊದಲು ಬಹಿರ್ದೆಸೆಗೆ ತೆರಳುತ್ತಿದ್ದ ಜಾಗೆ ಅತಿಕ್ರಮಣವಾಗುತ್ತಿದ್ದು ಇದು ನಿಲ್ಲಬೇಕು. ಇಲ್ಲಿನ ಜನರಿಗೆ ಸ್ಥಳೀಯ ಆಡಳಿತ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು
ನೇತ್ರಾ ಕಲಕುಟ್ರಿ ಎಸ್.ಎಂ.ಕೃಷ್ಣ ನಗರ ನಿವಾಸಿ
ನರಗುಂದ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ನಾವು ಕೃಷ್ಣ ನಗರದಾಗ ಇರಾಕತ್ತ 15 ವರ್ಷ ಆತು. ಆದರೆ ಇಲ್ಲಿ ಸರಿಯಾಗಿ ಬೇಕಾದ ಸೌಲಭ್ಯ ಸಿಗುತ್ತಿಲ್ಲ. ಪುರಸಭೆ ತಹಶೀಲ್ದಾರ್‌ ನಮ್ಮ ಕಷ್ಟ ನಿವಾರಣೆ ಮಾಡಬೇಕು
ನೂರಜಾನ್ ಹುನಗುಂದ
ರಗುಂದ ಅತಿಕ್ರಮಣಕ್ಕೆ ಕಡಿವಾಣ ಹಾಕಿ ಗುಡ್ಡದ ಕೆಳಗಿನ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಹಿಂದೆ ಕೃಷ್ಣ ನಗರದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಆ ಜಾಗ ಇಂದು ಅತಿಕ್ರಮಣವಾಗುತ್ತಿದೆ. ನಮ್ಮ ನಗರಕ್ಕೆ ಪುರಸಭೆ ಎಲ್ಲ ಮುಲಸೌಲಭ್ಯಗಳನ್ನು ಒದಗಿಸಬೇಕು. ಅತಿಕ್ರಮಣಕ್ಕೆ ಕಡಿವಾಣ ಹಾಕಬೇಕು.
ಬಸು ಹೂಗಾರ ಕೃಷ್ಣ ನಗರ ನಿವಾಸಿ
 ಐತಿಹಾಸಿಕ ಗುಡ್ಡ ರಕ್ಷಣೆಯಾಗಲಿ ಗುಡ್ಡ ಅತಿಕ್ರಮಣ ತಡೆಯುವಲ್ಲಿ ಪುರಸಭೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಬಂಡಾಯದ ನೆಲ ನರಗುಂದ ಇತಿಹಾಸ ಸಾರಲು ಐತಿಹಾಸಿಕ ಗುಡ್ಡ ವಿಶೇಷ ಕುರುಹು ಆಗಿದ್ದು ಅದರ ರಕ್ಷಣೆಯ ಅಗತ್ಯವಿದೆ.
ರಮೇಶ ಗಾಯಕವಾಡ ಕೃಷ್ಣ ನಗರ ನಿವಾಸಿ 
ನರಗುಂದ ಸಮಸ್ಯೆ ಬಗೆಹರಿಸಲು ಕ್ರಮ ಆಸರೆ ಮನೆಗಳು ಇರುವ ಎಸ್‌.ಎಂ.ಕೃಷ್ಣ ನಗರಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ರಸ್ತೆ ನಿರ್ಮಿಸಲಾಗಿದೆ. ಮನೆ ಮನೆಗೂ ನಳಗಳ ಮೂಲಕ ನೀರು ಒದಗಿಸಲಾಗಿದೆ. ಬೀದಿ ದೀಪಗಳನ್ನು ಕೆಲವೇ ದಿನಗಳಲ್ಲಿ ಅಳವಡಿಸಲಾಗುವುದು. ಚರಂಡಿಗಳನ್ನು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಲಾಗುವುದು. ಗುಡ್ಡದ ಕೆಳಗೆ ಹಾಗೂ ಸುತ್ತಲಿನ ಭಾಗದಲ್ಲಿ ಅರಣ್ಯೀಕರಣ ಮಾಡಲು ಅರಣ್ಯ ಇಲಾಖೆ ಜತೆಗೆ ಚರ್ಚಿಸಲಾಗಿದೆ. 
ಸಂಗಮೇಶ ಬ್ಯಾಳಿ ಮುಖ್ಯಾಧಿಕಾರಿ ಪುರಸಭೆ ನರಗುಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT