ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಜಾಗೃತಿ ಮೂಡಿಸಿದ ಅಂಗವಿಕಲರು

Published 15 ಏಪ್ರಿಲ್ 2024, 14:52 IST
Last Updated 15 ಏಪ್ರಿಲ್ 2024, 14:52 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು. ಅರ್ಹ ಪ್ರಜೆ ಮತದಾನ ಮಾಡುವುದು ಕಡ್ಡಾಯವಾಗಿದೆ’ ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.

ಲಕ್ಷ್ಮೇಶ್ವರದಲ್ಲಿ ಸೋಮವಾರ ಅಂಗವಿಕಲರ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು. ಈ ಬಗ್ಗೆ ಅಂಗವಿಕಲರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜದ ಪ್ರತಿಯೊಂದು ವರ್ಗದವರೂ ಮತದಾನ ಮಾಡುವಂತೆ ಉತ್ತೇಜಿಸುವುದು ಪ್ರಚಾರದ ಉದ್ದೇಶ’ ಎಂದರು.

ತಾಲ್ಲೂಕು ಪಂಚಾಯ್ತಿ ಕಚೇರಿಯಿಂದ ಆರಂಭವಾದ ಜಾಥಾ ಪುರಸಭೆ, ಸರ್ಕಾರಿ ಆಸ್ಪತ್ರೆ, ಶಿಗ್ಲಿ ನಾಕಾ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬಂದು ಕೊನೆಗೊಂಡಿತು.

ತಾಲ್ಲೂಕು ಪುನರ್ವಸತಿ ಕಾರ್ಯಕರ್ತೆ ಎಂಆರ್‌ಡಬ್ಲೂ ಭಾರತಿ ಮೂರಶಿಳ್ಳಿ ಮಾತನಾಡಿ, ‘18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ಸದೃಢ ಪ್ರಜಾಪ್ರಭುತ್ವಕ್ಕೆ ಯುವ ಜನರು ಮತದಾನದಲ್ಲಿ ಭಾಗಿಯಾಗುವುದು ಅತ್ಯವಶ್ಯ’ ಎಂದರು.

ಮಂಜುನಾಥ ರಾಮಗೇರಿ, ಶರಣಪ್ಪ ಚಕಾರದ, ನಾಗಪ್ಪ ಅಣ್ಣಿಗೇರಿ, ಸುಮಂಗಲಾ ಬೆಟಗೇರಿ, ನಾಮದೇವ ಲಮಾಣಿ, ಜಗದೀಶ ಕಮ್ಮಾರ, ಬಸವರಾಜ ತಳವಾರ, ವನಜಾಕ್ಷಿ ಹಾಲಗಿಮಠ, ಫಕ್ಕೀರೇಶ ಹಡಪದ, ಜಯಕ್ಕ ಲಮಾಣಿ, ಗಾಳೆಮ್ಮ ನಡುವಿನಮನಿ, ಜ್ಯೋತಿ ಗೌಳಿ, ಲಕ್ಷ್ಮವ್ವ ಕರಿನಿಂಗಣ್ಣನವರ, ಜಯಶ್ರೀ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT