ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಆರೋಗ್ಯಕ್ಕೆ ಪ್ರಾರ್ಥಿಸಿ ಮೃತ್ಯುಂಜಯ ಹೋಮ

Published 21 ಮಾರ್ಚ್ 2024, 16:15 IST
Last Updated 21 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಗದಗ: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಚೆನ್ನೈನಲ್ಲಿ ನಡೆಯುತ್ತಿರುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲೆಂದು ಹಾರೈಸಿ ಗುರುವಾರ ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ನೇತೃತ್ವದಲ್ಲಿ ಇಲ್ಲಿನ ವೀರೇಶ್ವರ ಪುಣ್ಯಶ್ರಮದಲ್ಲಿ ಮೃತ್ಯುಂಜಯ ಹೋಮ ಹಾಗೂ ಗಣ ಹೋಮ ನೆರವೇರಿಸಲಾಯಿತು.

ಆರೋಗ್ಯ ಸುಧಾರಿಸಿ ಮತ್ತೇ ಅವರು ಸಕ್ರಿಯ ರಾಜಕಾರಣಕ್ಕೆ ಬರಲೆಂದು ಪ್ರಾರ್ಥಿಸಲಾಯಿತು.

ಬಸವರಾಜ್ ಅಪ್ಪಣ್ಣವರ್, ಜಿ.ಕೆ.ಹಿರೇಮಠ್ (ಕೊಳ್ಳಿಮಠ), ದೇವಪ್ಪ ಮಲ್ಲಸಮುದ್ರ, ಆನಂದ್ ಹಂಡಿ, ಪ್ರಫುಲ್ ಪುಣೇಕರ, ಅಮೀನ್ ಕಾಗದಗಾರ, ಅಶೋಕ್ ತ್ಯಾಮನವರ್, ಹನುಮಂತಪ್ಪ ಕಂಚಗಾರ, ಮೌಲಹುಸೇನ್ ತಾಂಬೂಲಿ ಹಾಗೂ ಪಕ್ಷದ ಕಾರ್ಯಕರ್ತರು, ಪುಣ್ಯಶ್ರಮದ ನೂರಾರು ವಿದ್ಯಾರ್ಥಿಗಳು ಕುಮಾರಸ್ವಾಮಿ ಅವರ ಆರೋಗ್ಯಕ್ಕಾಗಿ ವಚನ ಪಠಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT