ಗದಗ: ‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳನ್ನು ವಿರೋಧಿಸಲು ಹುಬ್ಬಳ್ಳಿಯಲ್ಲಿ ಸೇರಿದ್ದ ಪಂಚಮಸಾಲಿ ಸಮಾಜದ ನಾಯಕರಲ್ಲಿ ನಿರಾಣಿ ಅವರನ್ನು ಹೊರತುಪಡಿಸಿ ಉಳಿದವರಿಗೆ ಯಾವ ನೈತಿಕತೆಯೂ ಇಲ್ಲ. ಅವರೆಲ್ಲ ‘ಪೇಯ್ಡ್’ ಗಿರಾಕಿಗಳು’ ಎಂದು ಶಾಸಕ ಸಿ.ಸಿ.ಪಾಟೀಲ ಕಿಡಿಕಾರಿದರು.

‘ಮುರುಗೇಶ ನಿರಾಣಿ ಅವರು ತನು-ಮನ-ಧನದಿಂದ ಪೀಠಕ್ಕೆ ನೆರವಾದವರು. ಉಳಿದವರು ಸಮಾಜಕ್ಕೆ ಏನಾದರೂ ₹10 ಕೊಟ್ಟಿದ್ದೇನೆ ಎಂದು ತಮ್ಮ ಎದೆ ಮುಟ್ಟಿಕೊಂಡು ಹೇಳಲಿ’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ನಾವೆಲ್ಲರೂ ಚನ್ನಮ್ಮನ ವಂಶಸ್ಥರು. ಇದೀಗ ಇದೇ ಸಮಾಜದಲ್ಲಿ ಹುಟ್ಟಿದವರು ಸಮಾಜ ಒಡೆಯಲು ಯತ್ನಿಸುವುದು ಬೇಡ. ಭಿನ್ನಾಭಿಪ್ರಾಯವಿದ್ದರೆ ಕೂಡಲಸಂಗಮದಲ್ಲಿ ಸಭೆ ಮಾಡಲಿ, ಸಮಸ್ಯೆಗಳಿದ್ದರೆ ಒಟ್ಟಿಗೆ ಕೂತು ಪರಿಹರಿಸಿಕೊಳ್ಳಬೇಕು’ ಎಂದರು.

‘2003ರ ಜನವರಿಯಲ್ಲಿ ಟ್ರಸ್ಟ್ ರಚನೆಯಾಗಿದೆ. ಅಧ್ಯಕ್ಷರಾದವರು ಮೂರು ವರ್ಷಕ್ಕಿಂತ ಹೆಚ್ಚು ಆ ಹುದ್ದೆಯಲ್ಲಿ ಇರಬಾರದು ಎಂದಿದೆ. ಆದರೆ, ಇದೀಗ ಪ್ರಭಣ್ಣ ಹುಣಸಿಕಟ್ಟಿಯವರೂ ಅಧ್ಯಕ್ಷರು ಎನ್ನುತ್ತಿದ್ದಾರೆ. ಅತ್ತ ವಿಜಯಾನಂದ ಕಾಶಪ್ಪ ಸಹ ಅಧ್ಯಕ್ಷರೆನ್ನುತ್ತಿದ್ದಾರೆ. ಇಬ್ಬರಲ್ಲಿ ಅಧ್ಯಕ್ಷರಾರು’ ಎಂದು ಕುಟುಕಿದರು.

‘ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳು ಸಮಾಜಕ್ಕಾಗಿ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಅದರ ಹೆಸರಿನಲ್ಲಿ ಯಾರು, ಯಾರ ಬಳಿ ಎಷ್ಟು ಹಣ ವಸೂಲಿ ಮಾಡಿದ್ದಾರೆ ಎಂಬುದರ ಪಟ್ಟಿ ಇದೆ. ಅದನ್ನು ಏನಾದರೂ ಬಿಚ್ಚಿಡಬೇಕಾ? ಬಿಚ್ಚಿಟ್ಟರೆ ಮರ್ಯಾದೆಯೇ ಇರಲ್ಲ’ ಎಂದು ಪ್ರಭಣ್ಣ ಹುಣಸಿಕಟ್ಟಿ ಸೇರಿ ಹುಬ್ಬಳ್ಳಿಯಲ್ಲಿ ಸಭೆ ಸೇರಿದ್ದವರ ಬಗ್ಗೆ ಎಚ್ಚರಿಕೆ ನೀಡಿದರು.

‘ಸಮಾಜದಲ್ಲಿ ಎರಡೂ ಪೀಠಕ್ಕೂ ಯಾರ ಅಭ್ಯಂತರವೂ ಇಲ್ಲ. ಅಲ್ಲಿ ನಡೆದುಕೊಳ್ಳುವವರು ಅಲ್ಲಿ ನಡೆದುಕೊಳ್ಳುತ್ತಾರೆ. ನಾನು ಕೂಡಲಸಂಗಮಕ್ಕೂ ಹೋಗುತ್ತೇನೆ. ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹೋಗುವಾಗ ಹರಿಹರ ಪೀಠಕ್ಕೂ ತೆರಳಿ, ಪ್ರಸಾದ ಮಾಡಿಕೊಂಡು ಅಲ್ಲಿನ ಶ್ರೀಗಳ ಆಶೀರ್ವಾದ ಪಡೆದು ತೆರಳುತ್ತೇನೆ. ಎರಡೂ ಪೀಠಗಳು ಸಮಾಜದ ಎರಡು ಕಣ್ಣುಗಳಿದ್ದಂತೆ’ ಎಂದರು.

ಪಂಚಮಸಾಲಿ ಸಮಾಜದ ಮುಖಂಡರಾದ ಮೋಹನ ಮಾಳಶೆಟ್ಟಿ, ವಿಜಯಕುಮಾರ ಗಡ್ಡಿ, ಸಿ.ಕೆ.ಮಾಳಶೆಟ್ಟಿ, ಸಿದ್ದು ಪಲ್ಲೇದ, ಅಯ್ಯಪ್ಪ ಅಂಗಡಿ, ಬಸವರಾಜ ಗಡ್ಡೆಪ್ಪನವರ, ಆರ್.ಬಿ.ದಾನಪ್ಪಗೌಡ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ, ಮುಖಂಡರಾದ ಎಂ.ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ಪ್ರಶಾಂತ ನಾಯ್ಕರ ಸೇರಿದಂತೆ ಹಲವರು ಇದ್ದರು.

ದಾನಪತ್ರ ಕಿಸೆಯಲ್ಲಿಟ್ಟುಕೊಂಡರೆ ಏನು ಪ್ರಯೋಜನ?

ಗದಗ: ‘ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ತಮಗಾಗಿ ಯಾವುದೇ ಆಸ್ತಿ ಮಾಡಿಕೊಂಡಿಲ್ಲ. ಅವರು ಉಳಿದುಕೊಳ್ಳುವ ಒಂದು ಕೊಠಡಿ ಬಿಟ್ಟರೆ ಬೇರಾವುದೇ ಆಸ್ತಿಯಿಲ್ಲ. ಕೂಡಲಸಂಗಮದಲ್ಲಿ ಇರುವ ಸಮಾಜದ ಆಸ್ತಿ ಪ್ರಭಣ್ಣ ಹುಣಸಿಕಟ್ಟಿಯವರ ಹೆಸರಲ್ಲೇ ಇವೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು. ‘ಪ್ರಭಣ್ಣ ಹುಣಸಿಕಟ್ಟಿಯವರು ಕೂಡಲಸಂಗಮ ಆಸ್ತಿಯನ್ನು ಬಿಟ್ಟುಕೊಡಲಿ. ದಾನಪತ್ರ ಮಾಡಿ ಕಿಸೆಯಲ್ಲಿ ಇಟ್ಟುಕೊಂಡು ಓಡಾಡಿದರೆ ಹೇಗೆ ಬಿಟ್ಟುಕೊಟ್ಟಂತಾಗುತ್ತದೆ’ ಎಂದು ಆಗ್ರಹಿಸಿದರು.

ಕಾಲಮಿತಿ ನೀಡಲು ಇವರ್ಯಾರು?

‘ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಪಂಚಮಸಾಲಿ ಸಮಾಜಕ್ಕೆ ನೀಡಿದ್ದ 2ಸಿ 2ಡಿ ಮೀಸಲು ಕುರಿತ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರ ಅಫಿಡವಿಟ್ ಹಿಂಪಡೆಯುತ್ತಿಲ್ಲ. ಬೆಳಗಾವಿಯಲ್ಲಿ ನಡೆದ ಹೋರಾಟದ ವೇಳೆ ಲಾಠಿ ಚಾರ್ಜ್ ಆದಾಗಲೂ ವಿರೋಧಿಸಲಿಲ್ಲ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು. ‘ಕೂಡಲಸಂಗಮದ ಪೂಜ್ಯರನ್ನು ಪೀಠದಿಂದ ಕೆಳಗಿಳಿಸುವ ಬದಲಾಯಿಸಲು ಕಾಲಮಿತಿ ನೀಡಲು ಇವರ್ಯಾರು?’ ಎಂದು ಕಿಡಿಕಾರಿದರು. ‘ವಿಜಯಾನಂದ ಕಾಶಪ್ಪನವರ ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ತಮ್ಮ ಧರ್ಮಪತ್ನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ವೇಳೆ ಕೂಡಲಸಂಗಮ ಪೂಜ್ಯರು ಒಳ್ಳೆಯವರಾಗಿದ್ದರು. ಅಂದು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬಾರಕೋಲು ಚಳವಳಿ ಮಾಡಿದ್ದರು. ಮಲಗಿದ್ದಾಗಲೂ ಬಾರುಕೋಲು ಬಿಡುತ್ತಿರಲಿಲ್ಲ. ಇದೀಗ ಸಿದ್ದರಾಮಯ್ಯನವರು ಸಿಎಂ ಆದ ಬಳಿಕ ಆ ಬಾರುಕೋಲೇ ಮಾಯವಾಗಿ ಬಿಟ್ಟಂತಿದೆ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.