ಗದಗ: ‘ತಮಿಳು ಭಾಷೆಯಿಂದ ಕನ್ನಡ ಉಗಮವಾಯಿತು ಎಂದು ಹೇಳಿಕೆ ನೀಡಿರುವ ಕಾಲಿವುಡ್ ನಟ ಕಮಲ್ ಹಾಸನ್ ಕೂಡಲೇ ಏಳು ಕೋಟಿ ಕನ್ನಡಿಗರ ಕ್ಷಮೆ ಕೇಳಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.

ನಟ ಕಮಲ್ ಹೇಳಿಕೆ ಖಂಡಿಸಿ ಶುಕ್ರವಾರ ನಗರದ ಟಿಪ್ಪು ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಬಳಿಕ ಕಮಲ್ ಹಾಸನ್ ಅವರ ಭಾವಚಿತ್ರ ಸುಡಲಾಯಿತು.

‘ನಟ ಕಮಲ್ ಹಾಸನ್ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಆಗುವಂತೆ ಮಾತನಾಡಿದ್ದಾರೆ. ಹಾಗಾಗಿ, ಅವರ ಹೊಸ ಸಿನಿಮಾ ‘ಥಗ್ ಲೈಫ್’ ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಮಾಡಿಕೊಡಬಾರದು. ಕನ್ನಡಿಗರ ಆಗ್ರಹ ಮೀರಿ ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ’ ಎಂದು ಎಚ್ಚರಿಸಿದರು.

‘ಕನ್ನಡ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಾಹಿತ್ಯ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಕನ್ನಡ ಸಾರಸ್ವತ ಲೋಕದ ಕವಿಗಳು, ಶರಣರು, ದಾರ್ಶನಿಕರು, ವಚನಕಾರರು ತಮ್ಮ ಅಮೂಲ್ಯ ಸಾಹಿತ್ಯ ಕೃಷಿಯಿಂದ ವಿಶ್ವ ಮನ್ನಣೆ ಪಡೆದಿದ್ದಾರೆ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಇಂತಹ ಶ್ರೀಮಂತ ಭಾಷೆಯನ್ನು ಅವಮಾನಿಸಿರುವ ಕಮಲ್ ಹೇಳಿಕೆ ಅತ್ಯಂತ ಕೀಳುಮಟ್ಟದಿಂದ ಕೂಡಿದೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭೆ ತರದು’ ಎಂದು ಹರಿಹಾಯ್ದರು.

ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಬಸವರಾಜ ಹೊಗೆಸೊಪ್ಪಿನ, ನಿಂಗನಗೌಡ ಮಾಲಿಪಾಟೀಲ, ವಿನಾಯಕ ಬದಿ, ನಬೀಸಾಬ ಕಿಲ್ಲೇದಾರ, ಆಶಾ ಜೂಲಗುಡ್ಡ, ತೌಸಿಫ್ ಢಾಲಾಯತ, ಮುತ್ತಣ್ಣ ಚವಡಣ್ಣವರ, ದಾದಾಪೀರ ನದಾಫ, ದಾವಲಸಾಬ ತಹಶೀಲ್ದಾರ, ಯಲ್ಲಪ್ಪ ಭೋವಿ, ಲೋಕೇಶ ಸುತಾರ, ಪ್ರವೀಣ ಗಾಣಗೇರ, ಚನ್ನಬಸಯ್ಯ ಗಡ್ಡದೇವರಮಠ, ಸಿರಾಜ್ ಹೊಸಮನಿ, ರಜಾಕ್ ಢಾಲಾಯತ, ಬಸವರಾಜ ರಗಟಿ, ಗೌಸ್ ಶಿರಹಟ್ಟಿ, ಮಹಾದೇವಿ ದೊಡ್ಡಗೌಡ್ರ, ಪ್ರಕಾಶ ಹುಡೇದ, ರಾಮನಗೌಡ ಹಳೇಮನಿ, ಹುಸೇನಸಾಬ ಕುಂಡಾಲಿ, ಮಾರುತಿ ಈಳಗೇರ, ಕೊಂಚಿಗೇರಮಠ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.