ಶನಿವಾರ, ಸೆಪ್ಟೆಂಬರ್ 24, 2022
21 °C

ಆಲಿಕಲ್ಲು ಮಳೆಗೆ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆಆಲೂರ: ಸಮೀಪದ ಯಾ.ಸ.ಹಡಗಲಿಯಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.

ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು, ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಕುಂಭ ದ್ರೋಣ ಮಳೆಗೆ ತತ್ತರಿಸಿರುವ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರನ್ನು ಭವಿಷ್ಯದ ಚಿಂತೆಗೆ ತಳ್ಳಿದೆ.

ರೋಣ ತಾಲ್ಲೂಕಿನ ಬೆಳವಣಿಕಿ, ಯಾ.ಸ.ಹಡಗಲಿ, ಹೊಳೆಆಲೂರ, ಸೋಮನಕಟ್ಟಿ, ಅಸೂಟಿ, ಮಾಳವಾಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದ್ದು, ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ರೈತರಾದ ಮಲ್ಲಯ್ಯ ಭಿಕ್ಷಾವತಿಮಠ, ಸಿದ್ದು ಕೆಂಪಶಿ, ಮಹಂತಯ್ಯ ಭಿಕ್ಷಾವತಿಮಠ, ರಮೇಶ್ ವಾಸನದ, ಕಲ್ಲನಗೌಡ ಚನ್ನಪ್ಪಗೌಡ್ರ, ಲಕ್ಷ್ಮಿ ಹಿರೇಮಠ, ಸೋಮಶೇಖರಯ್ಯ ಭಿಕ್ಷವತಿಮಠ, ರಾಜೇಶ್ವರಿ ಭಿಕ್ಷಾವತಿಮಠ, ಗಂಗಾಧರ್ ಯಲಿಗಾರ, ಕಲ್ಲಪ್ಪ ಹಡಪದ, ಮಲ್ಲಪ್ಪ ಕೆಂಪಸಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.