ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ವೈಜ್ಞಾನಿಕವಾಗಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
-ಎಸ್.ಎಸ್.ತೊಂಡಿಹಾಳ, ಪಿಡಿಓ, ಗ್ರಾಮ ಪಂಚಾಯಿತಿ, ರಾಜೂರ.
ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಬರುವ ಅಲ್ಪ ಅನುದಾನದಲ್ಲಿ ಬಹಳಷ್ಟು ಅವಶ್ಯಕತೆಯಿರುವ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ತೊಂದರೆಯೂ ಆಗಿದೆ. ಗ್ರಾಮದಲ್ಲಿ ಇನ್ನೂ ಉಳಿದ ಸಿಸಿ ರಸ್ತೆ, ಸಿಸಿ ಚರಂಡಿ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗುವುದು.
-ಕಳಕವ್ವ ಯಮನೂರಪ್ಪ ಜೊಳ್ಳಿಯವರ, ಅಧ್ಯಕ್ಷೆ, ಗ್ರಾಮ ಪಂಚಾಯಿತಿ, ರಾಜೂರ.
’ಈ ಮೊದಲು ಕಳಿಸಿದ್ದ ಟೆಂಡರ್ ತಾಂತ್ರಿಕ ತೊಂದರೆಯಿಂದ ವೃತ್ತ ಕಚೇರಿಯಿಂದ ರದ್ದುಪಡಿಸಲಾಗಿದ್ದು, ಮರು ಟೆಂಡರ್ ಕರೆಯಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಕೆಲಸದ ಆದೇಶಕ್ಕೆ ಕ್ರಮ ವಹಿಸಲಾಗುವುದು.
-ರಾಘವೇಂದ್ರ ಪುರೋಹಿತ, ಕಾರ್ಯನಿರ್ವಾಹಕ ಇಂಜನಿಯರ್, ಪಂಚಾಯತ್ ರಾಜ್ಯ ಎಂಜನಿಯರಿಂಗ್ ವಿಭಾಗ, ಗದಗ.
ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಭೀಮಾಂಭಿಕಾ ಬಡಾವಣೆಯಲ್ಲಿನ ರಸ್ತೆಯ ದುಸ್ಥಿತಿ