ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಗಂಗಾಧರ ಜಗದ್ಗುರುಗಳು ಧರ್ಮ ಸತ್ಕ್ರಾಂತಿಯ ಯುಗಪುರುಷ: ರಂಭಾಪುರಿ ಶ್ರೀ

Published 6 ನವೆಂಬರ್ 2023, 5:47 IST
Last Updated 6 ನವೆಂಬರ್ 2023, 5:47 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಮಾನವ ಧರ್ಮದ ಆದರ್ಶ ಮೌಲ್ಯ, ನಾಡಿನ ಸಾಂಸ್ಕ್ರತಿಕ ಹಿರಿಮೆ, ಧರ್ಮ ಪರಂಪರೆಗಳನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಸಮಾನತೆ, ಶಾಂತಿ, ಸಮೃದ್ಧಿ ನೆಲೆಗೊಳ್ಳುವಂತೆ ಮಾಡಿದ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಧರ್ಮ ಸತ್ಕ್ರಾಂತಿಯ ಯುಗಪುರುಷರು’ ಎಂದು ಬಾಳೇಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಪಟ್ಟಣದ ಇಟಗಿ ಬಸವೇಶ್ವರ ದೇವಸ್ಥಾನದಲ್ಲಿ ಲಿಂ. ವೀರಗಂಗಾಧರ ಶಿವಾಚಾರ್ಯರ 41ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ರಾಷ್ಟ್ರದ ಉಜ್ವಲ ಭವಿಷ್ಯವನ್ನು ನಿರ್ಮಾಣಗೊಳಿಸುವ ಶಕ್ತಿ ಯುವಜನತೆಗಿದ್ದು ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿ ಮತ್ತು ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇದೆ’ ಎಂದರು.

ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿಚಾಚಾರ್ಯರು ಮಾತನಾಡಿ, ‘ಧರ್ಮಕ್ಕಾಗಿ ಏಳಿರಿ, ಧರ್ಮಕ್ಕಾಗಿ ಬಾಳಿರಿ ಎಂಬ ಸಂದೇಶ ನೀಡಿದ ಲಿಂ. ವೀರಗಂಗಾಧರ ಶಿವಾಚಾರ್ಯರು ಧರ್ಮ, ಸಂಸ್ಕೃತಿ, ಪರಂಪರೆಯನ್ನು ಬಿತ್ತಿದ್ದಾರೆ. ಅವರು ತೋರಿದ ಧರ್ಮ ಮಾರ್ಗದಲ್ಲಿ ಎಲ್ಲರೂ ಬದುಕು ಸಾಗಿಸಬೇಕು’ ಎಂದರು.

ಲಕ್ಷ್ಮೇಶ್ವರ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಬಾಗಳೂರಿನ ಚಂದ್ರಶೇಖರ ಶಿವಾಚಾರ್ಯರು ಇದ್ದರು.

ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ, ವಿಜಯಕುಮಾರ ಮಹಾಂತಶೆಟ್ಟರ, ಎಸ್.ಎಫ್.ಆದಿ, ಆನಂದ ಮೆಕ್ಕಿ ಮಾತನಾಡಿದರು.

ಚಂಬಣ್ಣ ಬಾಳಿಕಾಯಿ, ಶೇಖಪ್ಪ ಹುರಕಡ್ಲಿ, ಸಿದ್ದನಗೌಡ ಬಳ್ಳೊಳ್ಳಿ, ನಂದೀಶ ಬಂಡಿವಾಡ, ಬಸವರಾಜ ಉಮಚಗಿ, ಮಲ್ಲೇಶಪ್ಪ ಹೊಟ್ಟಿ, ಸಂತೋಷ ಜಾವೂರ, ವಿರೂಪಾಕ್ಷ ಆದಿ, ರಾಮಣ್ಣ ಗೌರಿ, ಕಾಶಪ್ಪ ಮುಳಗುಂದ, ಬಸಣ್ಣ ಪುಟಾಣಿ, ಚನ್ನಪ್ಪ ಚಿಂಚಲಿ, ಪರಸಪ್ಪ ಹೊಸಮನಿ, ಬಸಯ್ಯ ಶಿಗ್ಲಿಮಠ, ಬಸವರಾಜ ಮೆಣಸಿನಕಾಯಿ, ಮಂಜುನಾಥ ಜಲ್ಲಿ, ರಾಜಶೇಖರ ಶಿಗ್ಲಿಮಠ, ಸೋಮು ಕೊಡ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT