ಮುಂಡರಗಿ: ‘ಪಡಿತರ ಚೀಟಿಯಲ್ಲಿ ಹಲವು ಲೋಪ ದೋಷಗಳಿದ್ದು, ಅವುಗಳ ತಿದ್ದುಪಡಿಗೆ ಅವಕಾಶ ನೀಡಬೇಕು ಮತ್ತು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿ ಸ್ಥಳೀಯ ಸಾರ್ವಜನಿಕರು ಶುಕ್ರವಾರ ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಂಡರಗಿ ಮಂಡಲ ಮಾಜಿ ಕಾರ್ಯದರ್ಶಿ ದೇವಪ್ಪ ಇಟಗಿ ಮಾತನಾಡಿ, ‘ಈ ಹಿಂದೆ ಸರ್ಕಾರ ನೀಡಿರುವ ಪಡಿತರ ಚೀಟಿಯಲ್ಲಿ ಹಲವು ಲೋಪ–ದೋಷಗಳಿವೆ. ಇದರಿಂದಾಗಿ ಬಡ ಪಡಿತರದಾರರು ಪಡಿತರ ಪಡೆದುಕೊಳ್ಳಲು ಪರದಾಡಬೇಕಿದೆ. ಆದ್ದರಿಂದ ಸರ್ಕಾರ ಪಡಿತರ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವು ಬಡ ಕುಟುಂಬಗಳು ಸಕಾಲದಲ್ಲಿ ಸಮರ್ಪಕವಾಗಿ ಪಡಿತರ ದೊರೆಯದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರಿಗೆ ಈವರೆಗೂ ಪಡಿತರ ಚೀಟಿಗಳು ದೊರೆತಿಲ್ಲ. ಬಡವರಿಗೆ ಹೊಸ ಅರ್ಜಿ ಹಾಕುವುದಕ್ಕೆ ಸರ್ಕಾರ ಅವಕಾಶ ನೀಡಬೇಕು. ಆ ಮೂಲಕ ಎಲ್ಲ ಬಡವರಿಗೆ ಪಡಿತರ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಛಾಯಾಗ್ರಹಕ ವೃತ್ತಿ ಮಾಡುತ್ತಿರುವ ಸಾಸಲವಾಡದ ಹಾಲೇಶ ಬಂಡಿ ಎನ್ನುವರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದಾರೆ. ಅವರ ಚಿಕಿತ್ಸೆಗೆ ಹಣದ ಸಮಸ್ಯೆ ಇದೆ. ನಿಧನರಾದ ಅವರ ತಾಯಿಯ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯುವಾಗ ಹಾಲೇಶ ಅವರ ಹೆಸರನ್ನೂ ಸಹ ಕೈಬಿಡಲಾಗಿದೆ. ಹೀಗಾಗಿ ಅವರು ಪಡಿತರವಿಲ್ಲದೇ ಪರದಾಡುವಂತಾಗಿದೆ. ಅದನ್ನು ಪುನಃ ತಿದ್ದುಪಡಿ ಮಾಡಿದರೆ ಅವರ ಚಿಕಿತ್ಸೆಗೆ ತುಂಬಾ ಅನುಕೂಲವಾಗುತ್ತದೆ’ ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮನವಿ ಸ್ವೀಕರಿಸಿದರು. ಶೇಖರಗೌಡ ಪಾಟೀಲ, ಹಾಲೇಶ ಬಂಡಿ, ಬಸಪ್ಪ ವಡ್ಡರ, ದ್ಯಾಮನಗೌಡ ಪಾಟೀಲ, ಎಂ.ಎಸ್.ಪಾಟೀಲ, ಹುಚ್ಚಪ್ಪ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.