ಲಕ್ಷ್ಮೇಶ್ವರ: ತಾಲ್ಲೂಕಿನ ದೊಡ್ಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎನ್.ಎಸ್.ಮಲ್ಲೇದ ಸೇವಾ ನಿವೃತ್ತಿ ಹೊಂದಿದ್ದು ಮಂಗಳವಾರ ಅವರನ್ನು ಬೀಳ್ಕೊಡಲಾಯಿತು.

ದೊಡ್ಡೂರ ಕ್ಲಸ್ಟರ್ ಸಿಆರ್ಪಿ ಶಿವಾನಂದ ಅಸುಂಡಿ ಮಾತನಾಡಿ, ‘ಎನ್.ಎಸ್.ಮಲ್ಲೇದ ಅವರು 31 ವರ್ಷಗಳ ಕಾಲ ಶಿಕ್ಷಕಿಯಾಗಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ್ದಾರೆ. ಅವಕಾಶ ದೊರೆತಾಗ ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂಥವರನ್ನು ಎಂದಿಗೂ ಮರೆಯದು’ ಎಂದರು.

ಉಮೇಶ ಡೊಳ್ಳಿನ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ, ವಾಸು ದೀಪಾಲಿ, ಬನ್ನೇಶ ಲಮಾಣಿ, ಪುಟ್ಟಪ್ಪ ಲಮಾಣಿ, ಶ್ರೀಶೈಲ ಬಾಬಣ್ಣವರ, ಕೆ.ಸಿ ಪಟ್ಟೇದ, ವಿನಯ ಬಾಬಣ್ಣವರ, ವಿದ್ಯಾಶ್ರಿ ಬಾಬಣ್ಣವರ ಇದ್ದರು. ಮುಖ್ಯ ಶಿಕ್ಷಕ ಎಫ್.ಎನ್.ಗೋಣೆಪ್ಪನವರ ಸ್ವಾಗತಿಸಿದರು. ಬಿ.ಎ.ಹಲಗೋಡದ ನಿರೂಪಿಸಿದರು. ಎಸ್.ಬಿ.ಜಗ್ಗಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.