ರೋಣ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ರಾಜೀನಾಮೆ ನೀಡಿದ್ದು, ಬಾಕಿ ಉಳಿದ ಅವಧಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪುರಸಭೆಯ ಸಭಾಭವನದಲ್ಲಿ ಜೂನ್ 18ರಂದು ತಹಶೀಲ್ದಾರ್ ನಾಗರಾಜ.ಕೆ ನೇತೃತ್ವದಲ್ಲಿ ಜರುಗಲಿದೆ.

ಪಟ್ಟಣದ ಸ್ಥಳೀಯ ಆಡಳಿತಕ್ಕೆ ಇದು ಕೊನೆಯ ಅವಧಿಯಾಗಿದ್ದು, ಸಂಪೂರ್ಣ ಅವಧಿ ಮುಗಿಯಲು ಕೇವಲ 5 ತಿಂಗಳು ಮಾತ್ರ ಬಾಕಿ ಉಳಿದಿದೆ. ಸದ್ಯ ಪುರಸಭೆಯ 23 ವಾರ್ಡ್ಗಳ ಪೈಕಿ 16 ವಾರ್ಡ್ಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಪುರಸಭೆ ಚುನಾವಣೆಯ ಹಿತದೃಷ್ಟಿಯಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆ ಮಹತ್ವ ಪಡೆದಿದೆ.

ಪುರಸಭೆಯ 2ನೇ ಅವಧಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 12ನೇ ವಾರ್ಡ್ ಸದಸ್ಯೆ ಶಕುಂತಲಾ ಚಿತ್ರಗಾರ 18ನೇ ವಾರ್ಡ್ ಸದಸ್ಯೆ ಬಸಮ್ಮ ಕೊಪ್ಪದ ಹಾಗೂ 20ನೇ ವಾರ್ಡ್ ಸದಸ್ಯೆ ಚನ್ನಬಸಮ್ಮ ಹಿರೇಮಠ ಅವರುಗಳ ನಾಮಪತ್ರ ಸಲ್ಲಿಸಿದ್ದು, ಅವರುಗಳ ಮಧ್ಯ ಸಾಮಾನ್ಯ ಪೈಪೋಟಿ ಕಂಡುಬರಲಿದ್ದು, ಪಕ್ಷದ ಆಂತರಿಕ ನೆಲೆಯಲ್ಲಿ ಬಸಮ್ಮ ಕೊಪ್ಪದ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ 2ನೇ ಅವಧಿಗೆ ಪರಿಶಿಷ್ಟ ಜಾತಿ ಪುರುಷ ಮೀಸಲಾತಿಯಿದ್ದು, ಈ ಸ್ಥಾನಕ್ಕೆ 22ನೇ ವಾರ್ಡ್ ಸದಸ್ಯ ಹನುಮಂತ ತಳ್ಳಿಕೇರಿ ಮಾತ್ರ ಆಯ್ಕೆಯಾಗಿದ್ದಾರೆ.

ಜಾತಿ ಲೆಕ್ಕಾಚಾರ ಪುರಸಭೆಯ 2ನೇ ಅವಧಿಯ ಮೊದಲಾರ್ಧದಲ್ಲಿ ಪ್ರಬಲ ಗಾಣಿಗ ಸಮುದಾಯಕ್ಕೆ ಸೇರಿದ ಗೀತಾ ಮಾಡಲಗೇರಿ ಅವಕಾಶ ಪಡೆದಿದ್ದಾರೆ. ಬಾಕಿ ಅವಧಿಗೆ ಪಟ್ಟಣದ ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮಾಜಕ್ಕೆ ಸೇರಿದ 18ನೇ ವಾರ್ಡ್ ಸದಸ್ಯೆ ಬಸಮ್ಮ ಕೊಪ್ಪದ ಪಕ್ಷದ ಮುಖಂಡರ ನೆಚ್ಚಿನ ಆಯ್ಕೆಯಾಗಬಹುದು ಎಂಬ ಮಾಹಿತಿ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.