ಶಹಾಬಾದ್: ನಗರಸಭೆಯ ನೂತನ ಅಧ್ಯಕ್ಷರಾಗಿ ಅಂಜಲಿ ಗಿರೀಶ ಕಂಬಾನೂರ ಮತ್ತು ಉಪಾಧ್ಯರಾಗಿ ಸಲೀಮಾ ಬೇಗಂ ಮೆಹಬೂಬ ಗುರುವಾರ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ನಗರಸಭೆಯ ನೂತನ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ‘ನಗರಸಭೆಯ ಅಧ್ಯಕ್ಷೆಯಾಗಿ ನಗರದ 27 ವಾರ್ಡ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಸದಸ್ಯರ ಹಾಗೂ ನಿವಾಸಿಗಳ ಸಹಕಾರದಿಂದ ಮಾಡುವುದು ನನ್ನ ಆದ್ಯತೆ’ ಎಂದು ತಿಳಿಸಿದರು.

‘ನಗರದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರು, ಸಾರ್ವಜನಿಕ ಮೂತ್ರಾಲಯ ಹಾಗೂ ಶೌಚಾಲಯ ಸೇರಿದಂತೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನನ್ನ ಜವಾಬ್ದಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಗೊಂಡ ಜನಪ್ರತಿನಿಧಿಗಳು ಜನರ ಆಶಯಕ್ಕೆ ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಮೊದಲ ಕರ್ತವ್ಯ’ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಉಪಾಧ್ಯಕ್ಷ ವಿಜಯಕುಮಾರ ಮಟ್ಟತ್ತಿ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ಯಾಕೂಬ ಮರ್ಚಂಟ, ಕುಮಾರ ಚವ್ಹಾಣ, ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಅನ್ವರ ಪಾಶಾ, ಹಾಷಮ್ ಖಾನ್, ರಾಜೇಶ ಯನಗುಂಟಿಕರ್, ನಗರಸಭೆಯ ಅಧಿಕಾರಿಗಳಾದ ಸುನೀಲುಮಾರ, ಶಿವರಾಜಕುಮಾರ ಜಟ್ಟೂರ್, ಸಾಬಣ್ಣ ಸುಂಗಲಕರ್, ನಗರಸಭೆಯ ಸದಸ್ಯರು ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.