‘ಮಕ್ಕಳಿಗೆ ವಚನಗಳ ಸಾರ ತಿಳಿಸಿಕೊಡಿ’
ಮಕ್ಕಳಿಗೆ ಬಾಲ್ಯದಲ್ಲಿಯೇ ವಚನಗಳ ಸಾರ ತಿಳಿಸಿಕೊಟ್ಟರೆ; ಭವಿಷ್ಯದಲ್ಲಿ ಅವರು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪಗೊಳ್ಳುವರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ್ ಹೇಳಿದರು. ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರ ಸಿಗದಿದ್ದರೆ ಅದು ಅನರ್ಥಕ್ಕೆ ಕಾರಣವಾಗುತ್ತದೆ. ಹಾಗಾಗಿ ಶರಣರ ವಚನ ಸಾಹಿತ್ಯದ ಸಹಚರ್ಯ ಮಕ್ಕಳಿಗೆ ಅವಶ್ಯವಾಗಿ ಬೇಕೇ ಬೇಕು. ಮಕ್ಕಳನ್ನು ಸಂವೇದನಾಶೀಲ ವ್ಯಕ್ತಿಗಳನ್ನಾಗಿ ಮಾಡುವ ಶಕ್ತಿ ವಚನಗಳಿಗೆ ಇದೆ. ಹೀಗಾಗಿ ಇಂತಹ ಶರಣ ಸಾಹಿತ್ಯ ಸಮ್ಮೇಳನಗಳು ಮೇಲಿಂದ ಮೇಲೆ ನಡೆಯಬೇಕಿದೆ ಎಂದರು.