ಶಿರಹಟ್ಟಿ: ಇಂದಿನ ದಿನಗಳಲ್ಲಿ ಮೌಲ್ಯಯುತ ಪತ್ರಿಕೋದ್ಯಮ ಅವಶ್ಯಕತೆ ಇದ್ದು, ನಿಷ್ಠೆ ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಸೇವೆ ಸ್ಮರಣೀಯವಾಗಿರುತ್ತದೆ ಎಂದು ಜ. ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಸ್ಥಳೀಯ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಸುದ್ದಿಗಳ ಗುಣಮಟ್ಟ ಕುಸಿಯುತ್ತಿದ್ದು, ವಸ್ತುನಿಷ್ಠ ಬರಹಗಳ ಸಂಖ್ಯೆ ಕಡಿಮೆಯಾಗಿದೆ. ಹಲವು ಬಾರಿ ಸುದ್ದಿಗಳು ರಾಜಕೀಯ ಹಾಗೂ ಸಾಮಾಜಿಕವಾಗಿ ಪಟ್ಟಭದ್ರರ ಪ್ರಭಾವಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ವಿಷಯ. ಅಧ್ಯಯನಶೀಲತೆ ಮತ್ತು ನೈತಿಕ ಬದ್ಧತೆ ಪತ್ರಕರ್ತನ ಅಸ್ತ್ರವಾಗಬೇಕು ಎಂದರು.

ಇಲ್ಲಿ ತಾಲ್ಲೂಕು ಪತ್ರಿಕಾ ಭವನದ ಅಗತ್ಯವಿದೆ. ಪಂಚಾಯ್ತಿಯಿಂದ ಸಿ.ಎ. ನಿವೇಶನ ಒದಗಿಸಬೇಕು. ಶ್ರೀ ಮಠದಿಂದ ಭವನ ನಿರ್ಮಾಣಕ್ಕೆ ₹ 1 ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಬಿ. ಹೆಸರೂರ, ಸೈಕ್ಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪವಿತ್ರಾ ಕುರ್ತಕೋಟಿ ಹಾಗೂ ಯುಪಿಎಸ್ಸಿ ತೇರ್ಗಡೆ ಹೊಂದಿದ ಯಲ್ಲಪ್ಪ ಗೋಶಲ್ಯನವರರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ ಕೆ. ರಾಘವೇಂದ್ರ ರಾವ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಕಾರ್ಯಕ್ರಮದ ಅಧ್ಯಕ್ಷ ಮಂಜುನಾಥ ಆರೆಪಲ್ಲಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದೇವಕ್ಕ ಗುಡಿಮನಿ, ಮುಖಂಡರಾದ ವಿಶ್ವನಾಥ ಕಪ್ಪತ್ತನವರ, ಹುಮಾಯೂನ್ ಮಾಗಡಿ, ಡಿ.ಕೆ.ಹೊನ್ನಪ್ಪನವರ, ತಿಪ್ಪಣ್ಣ ಕೊಂಚಿಗೇರಿ, ಶಿವಪ್ರಕಾಶ ಮಹಾಜನಶೆಟ್ಟರ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಚಂದ್ರಕಾಂತ ಕುಸಲಾಪೂರ, ತಹಶೀಲ್ದಾರ್ ಕೆ. ರಾಘವೇಂದ್ರರಾವ್, ಪಿಎಸ್ಐ ಚನ್ನಯ್ಯ ದೇವೂರ, ನಿವೃತ್ತ ಶಿಕ್ಷಕ ಎಚ್.ಎಂ. ದೇವಗಿರಿ, ಡಾ. ಸುನೀಲ್ ಬುರಬುರೆ, ಎನ್.ಆರ್. ಕುಲಕರ್ಣಿ, ಎಂ.ಕೆ.ಲಮಾಣಿ, ಬಸವರಾಜ ತುಳಿ, ಪುನೀತ್ ಓಲೇಕಾರ, ಶಿವಪ್ಪ ಹದ್ಲಿ, ವಿರೂಪಾಕ್ಷಪ್ಪ ಕಣವಿ, ಪ್ರಕಾಶ ಬೋರಶೆಟ್ಟರ ಇತರರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.