ಗುರುವಾರ , ಮೇ 19, 2022
20 °C
ಬಸವೇಶ್ವರ ಪುತ್ಥಳಿ ಅನಾವರಣ

ಬಸವಣ್ಣನವರ ತತ್ವ ಪಾಲಿಸೋಣ: ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ವಿಶ್ವಗುರು ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿದ್ದು ಮನಸ್ಸಿಗೆ ಸಂತಸ ತಂದಿದೆ. ಬಸವಣ್ಣನವರ ತತ್ವದ ಅಡಿಯಲ್ಲಿ ಎಲ್ಲರೂ ನಡೆಯೋಣ’ ಎಂದು ತೋಂಟದಾರ್ಯ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಬಸವೇಶ್ವರ ನಗರದಲ್ಲಿ ನಿರ್ಮಾಣಗೊಂಡಿರುವ ಬಸವೇಶ್ವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಅಖಿಲ ಭಾತರ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕೊರ್ಲಹಳ್ಳಿ ಬಸವ ವನವನ್ನು ಲೋಕಾರ್ಪಣೆಗೊಳಿಸಿದರು.

ಸುರೇಖಾ ಸದಾನಂದ ಪಿಳ್ಳಿ ಮಾತನಾಡಿ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಿದ ನಗರಸಭೆ ಹಾಗೂ ದಾನಿಗಳನ್ನು ಸ್ಮರಿಸಿದರು. ಪತಿಯ ನಿಧನದ ನಂತರ ಈ ಕಾರ್ಯವನ್ನು ಪೂರ್ಣಗೊಳಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಗಂಗಾಯೋಗ ನಿಸರ್ಗ ಚಿಕಿತ್ಸಾ ಹಾಗೂ ಆರ್ಯುವೇದ ಸಂಶೋಧನಾ ಕೇಂದ್ರದ ವೈದ್ಯ ಚನ್ನಬಸವಣ್ಣ ಮಾತನಾಡಿ, ‘ಜಗಜ್ಯೋತಿ ಬಸವಣ್ಣನವರು ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕಾಗಿ ಹಾಗೂ ಸಮಾನತೆಗಾಗಿ ಹೋರಾಡಿದ ಮಹಾನ್‌ ಹೋರಾಟಗಾರ’ ಎಂದು ಹೇಳಿದರು.

ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಸಾವಿತ್ರಿ ಗೌಡರ, ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ, ಬಸವೇಶ್ವರ ಪುತ್ಥಳಿ ದಾನಿಗಳಾದ ಬಸವರಾಜ ಚನ್ನಪ್ಪ ಕಾಡಪ್ಪನವರ, ಬಸವೇಶ್ವರ ನಗರ ನಾಮಕರಣ ರೂವಾರಿಗಳಾದ ಶಂಕರ ಬಸಪ್ಪ ತಡಸ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ‘ಧರ್ಮ, ನೀತಿ, ಸಂಸ್ಕೃತಿ ಏನಾದರೂ ಉಳಿದಿದ್ದರೆ ಅದು ತಾಯಂದಿರಿಂದ ಮಾತ್ರ’ ಎಂದು ಹೇಳಿದರು.

ಬಣಗಾರ ಸಮಾಜ ಸೇವಾ ಸಂಘದ ಅಧ್ಯಕ್ಷ ವೀರೇಶ ವೀರಭದ್ರಪ್ಪ ಮುನವಳ್ಳಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್‌.ಎಸ್‌. ಪಟ್ಟಣಶೆಟ್ಟಿ, ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಧರ್ಮದರ್ಶಿ ರಾಜಪ್ಪ ಮಿಣಜಗಿ, ಶಿವಪುತ್ರಪ್ಪ ಬೇವಿನಮರದ, ಈರಣ್ಣ ನಾಗಪ್ಪ ಕಾತರಕಿ, ಶಂಭು ವೀರಪ್ಪ ಕಾರಕಟ್ಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ ಕಮಿಟಿ ಧರ್ಮದರ್ಶಿ ಮಹೇಶ ಗಡಾದ, ಶಿವಬಸಪ್ಪ ಯಂಡಿಗೇರಿ, ಅರುಣ ಶಂಕ್ರಪ್ಪ ಮುನವಳ್ಳಿ, ಹಾವೇರಿ- ಗದಗ ಲೋಕಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಚಂದ್ರು ಬಸಪ್ಪ ತಡಸದ, ಬಣಗಾರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಂದ್ರಕಾಂತ ರಾಚಪ್ಪ ಕೆರೂರ ಇದ್ದರು.

ಗುರುಲಿಂಗಪ್ಪ ಕಾಡಪ್ಪನವರ ಸ್ವಾಗತಿಸಿದರು. ಎಸ್.ಎಸ್.ಪಿಳ್ಳಿ ವಂದಿಸಿದರು. ಎಸ್.ಕೆ.ಮಂಗಳಗುಡ್ಡರವರು ನಿರೂಪಣೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು