ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ವೈದ್ಯರ ತಂಡಕ್ಕೆ ಶ್ಲಾಘನೆ
Last Updated 24 ನವೆಂಬರ್ 2022, 3:47 IST
ಅಕ್ಷರ ಗಾತ್ರ

ಗದಗ: ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಏಳು ತಿಂಗಳ ಮಗುವಿಗೆ ಉದರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಮಗು ಆರೋಗ್ಯದಿಂದಿದ್ದು, ಚೇತರಿಸಿಕೊಳ್ಳುತ್ತಿದೆ.

ಏಳು ತಿಂಗಳ ಮಗುವನ್ನು ವಿಪರೀತ ವಾಂತಿ ಹಾಗೂ ರಕ್ತ ಮಿಶ್ರಿತ ಭೇದಿ ಬಾಧಿಸಿತ್ತು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಗುವನ್ನು ನ.21ರಂದು ಜಿಮ್ಸ್‌ಗೆ ದಾಖಲಿಸಲಾಗಿತ್ತು.

‘ವೈದ್ಯರು ಸ್ಕ್ಯಾನಿಂಗ್‌ ವರದಿ ನೋಡಿದಾಗ ಮಗುವಿಗೆ ಕರುಳಿನ ತೊಂದರೆ (ಇಂಟ್ಯುಸಸ್ಸಾಪ್ಶನ್‌) ಇರುವುದು ಗೊತ್ತಾಗಿದೆ. ತುರ್ತು ಚಿಕಿತ್ಸೆ ನಡೆಸದಿದ್ದರೆ ಕರುಳಿನ ಗ್ಯಾಂಗ್ರೀನ್ ಆಗುವ ಸಂಭವವಿತ್ತು. ಪ್ರಥಮ ಚಿಕಿತ್ಸೆಯ ನಂತರ ಡಾ. ವಿನಯಕುಮಾರ ತೇರದಾಳ (ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು), ಡಾ. ಜ್ಯೋತಿ ಕರೆಗೌಡರ್ (ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರು), ಡಾ. ಜಮೀರ್ (ಅರವಳಿಕೆ ತಜ್ಞ), ಡಾ. ವಿನಾಯಕ, ಡಾ. ಪ್ರಿಯಾ ಅವರ ತಂಡ ಮಗುವಿಗೆ ಉದರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿತು. ಮಗು ಚೇತರಿಕೆ ಕಾಣುತ್ತಿದ್ದು ಆರೋಗ್ಯದಿಂದಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಿದ್ದತೆ ನಡೆಸಲಾಗಿದೆ’ ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೇರವೇರಿಸಿದ ತಂಡವನ್ನು ಡಾ. ಬಸವರಾಜ ಬೊಮ್ಮನಹಳ್ಳಿ ಮತ್ತು ವೈದ್ಯಕೀಯ ಅಧೀಕ್ಷಕಿ ಡಾ. ರೇಖಾ ಸೋನಾವನೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT