ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಟ್ರ್ಯಾಕ್ಟರ್ ಸಾಲ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Published 4 ಮಾರ್ಚ್ 2024, 18:46 IST
Last Updated 4 ಮಾರ್ಚ್ 2024, 18:46 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸಾಲ ತೀರಿಸಲು ಸಾಧ್ಯವಾಗದೆ ತಾಲ್ಲೂಕಿನ ಗೋವನಾಳ ಗ್ರಾಮದ ಒಂದೇ ಕುಟುಂಬದ ಮೂವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೇಣುಕಾ ತೇಲಿ (50), ಸಹೋದರಿ ಸಾವಕ್ಕ ತೇಲಿ (45) ಮತ್ತು ರೇಣುಕಾ ಅವರ ಪುತ್ರ ಮಂಜುನಾಥ (22) ಮೃತರು.

‘ಟ್ರ್ಯಾಕ್ಟರ್ ಸಾಲ ತೀರಿಸುವ ವಿಷಯದಲ್ಲಿ ಮನೆಯಲ್ಲಿ ಜಗಳವಾಗಿದೆ. ರೇಣುಕಾ ಮತ್ತು ಮಂಜುನಾಥ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಯಲವಿಗಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿನ ಸುದ್ದಿ ಕೇಳಿ ಮನೆಯಲ್ಲಿ ಸಾವಕ್ಕ ನೇಣು ಹಾಕಿಕೊಂಡರು’ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವೇರಿ ರೈಲ್ವೆ ಪೊಲೀಸ್ ಠಾಣೆ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT