ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ, ಸೇತುವೆ ಅಭಿವೃದ್ಧಿಪಡಿಸಲು ಒತ್ತಾಯ

ತೆಗ್ಗಿನ ಭಾವನೂರು ಗ್ರಾಮದಲ್ಲಿ ತಹಶೀಲ್ದಾರ ಗ್ರಾಮ ವಾಸ್ತವ್ಯ
Last Updated 20 ಮಾರ್ಚ್ 2022, 4:58 IST
ಅಕ್ಷರ ಗಾತ್ರ

ಶಿರಹಟ್ಟಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ತಾಲ್ಲೂಕಿನ ತೆಗ್ಗಿನ ಭಾವನೂರು ಗ್ರಾಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಶನಿವಾರ ಉದ್ಘಾಟಿಸಿದರು.

ರಸ್ತೆ, ಸೇತುವೆ ಅಭಿವೃದ್ಧಿ ಪಡಿಸಲು ಒತ್ತಾಯ: ತೆಗ್ಗಿನಭಾವನೂರ ಗ್ರಾಮದಿಂದ ಚಿಕ್ಕವಡ್ಡಟಿ, ನವೆಭಾವನೂರ, ಹೂಸಳ್ಳಿ ಗ್ರಾಮ ಸೇರಿದಂತೆ 7 ಹಳ್ಳಿಗಳು ಹಾಗೂ ಸಾವಿರಕ್ಕೂ ಅಧಿಕ ಹೆಕ್ಟೇರ್‌ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಈ ರಸ್ತೆ ಕೇಸರು ಗದ್ದೆಯಂತಾಗುತ್ತದೆ, ಮಾರ್ಗ ಮಧ್ಯೆದಲ್ಲಿರುವ ಸೇತುವೆಯೂ ತಳಭಾಗದಲ್ಲಿ ಇರುವುದರಿಂದ ಮಳೆಗಾಲದಲ್ಲಿ ನೀರು ಸೇತುವೆ ಮೇಲೆ ಹರಿಯುತ್ತದೆ, ಇದರಿಂದ ರೈತರು, ಹಳ್ಳಿ ಜನರು ಆಕಡೆಯಿಂದ ಈ ಕಡೆ ಬರಲು ದಿನಗಟ್ಟಲೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದನ್ನು ಸರಿಪಡಿಸುವಂತೆ ಹಲವಾರು ಬಾರಿ ಮನವಿ ನೀಡಿದರು ಯಾವ ಪ್ರಯೋಜನವಾಗಿಲ್ಲ. ಆದ್ದರಿಂದ ಶೀಘ್ರದಲ್ಲೇ ರಸ್ತೆ ಮತ್ತು ಸೇತುವೆಯನ್ನು ಅಭಿವೃದ್ಧಿ ಪಡಿಸಿ ಗ್ರಾಮಸ್ಥರು ತಹಶೀಲ್ದಾರ್ ಕಲಗೌಡ ಪಾಟೀಲ್ ಅವರ ಮುಂದೆ ಅವಲತ್ತುಕೊಂಡರು.

ತಾ.ಪಂ ಇಒ ನಿಂಗಪ್ಪ ಓಲೇಕಾರ, ಗ್ರಾ.ಪಂ ಅಧ್ಯಕ್ಷೆ ಹನುಮವ್ವ ಪಾಟೀಲ್, ಸದಸ್ಯ ಹೊನಕೇರೆಪ್ಪ ಸಂಶಿ, ಯಶೋದ ಪಾಟೀಲ್, ಫಕ್ಕೀರವ್ವ ಪೂಜಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT