ಗಜೇಂದ್ರಗಡ: ದನಕಟ್ಟುವ ದೊಡ್ಡಿಯಾಗಿದ್ದ ಸ್ವಾತಂತ್ರ್ಯಯೋಧನ ಸಮಾಧಿ ಸ್ಥಳ ಕೊನೆಗೂ ಮುಕ್ತಿ ಕಾಣುತ್ತಿದೆ. ಅಭಿವೃದ್ಧಿ ಪಡಿಸಬೇಕಿದ್ದ ಸ್ಥಳೀಯ ಆಡಳಿತ ನಿರಾಸಕ್ತಿ ತೋರಿತು. ಇದರಿಂದ ಬೇಸತ್ತ ಯೋಧನ ಕುಟುಂಬದವರು ತಾವೇ ಅಭಿವೃದ್ಧಿಗೆ ಮುಂದಾಗಿದ್ದಾರೆ.

ಅಂದಾನಪ್ಪ ದೊಡ್ಡಮೇಟಿ ಅವರ ಪ್ರಭಾವದಿಂದಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಬ್ರಿಟಿಷರ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು ಹಲವರು. ಈ ಪೈಕಿ ಸೂಡಿ ಗ್ರಾಮದ ಅಬ್ಬಿಗೇರಿ ವಿರೂಪಾಕ್ಷಪ್ಪ ಸಹ ಒಬ್ಬರು.
ಸಮಾಜವಾದಿ ಚಿಂತಕ, ಬಹುಭಾಷಾ ಪಂಡಿತ, ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತರಾಗಿದ್ದ ಅಬ್ಬಿಗೇರಿ ಅವರು ಅಂತ್ಯಕ್ರಿಯೆ ಸಂದರ್ಭದಲ್ಲಿ ಅಲ್ಲಿನ ಗ್ರಾ.ಪಂ. ಆಡಳಿತವು ವಿರೂಪಾಕ್ಷ ಅಬ್ಬಿಗೇರಿ ಒಂದು ಕುಟುಂಬಕ್ಕೆ ಸೀಮಿತವಲ್ಲ. ಇಡೀ ಗ್ರಾಮದ ಹೆಮ್ಮೆ. ಅವರ ಸಮಾಧಿ ಸ್ಥಳದ ಸಂರಕ್ಷಣೆ ಮಾಡಿ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಿತ್ತು. ಆಗಸ್ಟ್ 20ಕ್ಕೆ ಅವರು ನಿಧನರಾಗಿ ಎರಡು ವರ್ಷವಾಯಿತು. ಇದುವರೆಗೆ ಸಮಾಧಿ ಸ್ಥಳದ ಅಭಿವೃದ್ಧಿ ಆಗಿಲ್ಲ. ಸದ್ಯಕ್ಕದು ತಿಪ್ಪೆ ಗುಂಡಿಯಾಗಿ, ದನ ಕಟ್ಟುವ ಕೊಟ್ಟಿಗೆಯಂತಾಗಿದೆ.

ಅಬ್ಬಿಗೇರಿ ಕಿರು ಪರಿಚಯ: 1924ರಲ್ಲಿ ಜನಿಸಿದ್ದ ವಿರೂಪಾಕ್ಷಪ್ಪ ಅಬ್ಬಿಗೇರಿ ಅವರು ವಿದ್ಯಾರ್ಥಿ ಜೀವನದಲ್ಲಿ ಶಾಲೆಯನ್ನು ಬಹಿಷ್ಕರಿಸಿ 42ರ ಚಲೇಜಾವ್ ಚಳುವಳಿಯಲ್ಲಿ ಧುಮುಕಿ ಬ್ರಿಟಿಷರ ಕೆಂಗೆಣ್ಣಿಗೆ ಗುರಿಯಾಗಿ ಹಿಂಡಲಗಾ ಜೈಲಿನಲ್ಲಿ 6 ತಿಂಗಳು ಸೆರೆವಾಸ ಅನುಭವಿಸಿದ್ದರು.

ಸ್ವಾತಂತ್ರ್ಯ ನಂತರ ವಿದ್ಯಾರ್ಥಿಗಳಲ್ಲಿ ದೇಶದ ಸಮಗ್ರತೆಯ ಬಗ್ಗೆ ಜಾಗೃತಿ ಮೂಡಿಸಲು 1950ರಲ್ಲಿ ಸೂಡಿ ಗ್ರಾಮದಲ್ಲಿ `ರಾಷ್ಟ್ರ ಸೇವಾದಲ~ ಸ್ಥಾಪಿಸಿದರು. 1950-60 ಮಧ್ಯದಲ್ಲಿ ರೋಣ ತಾಲ್ಲೂಕಿನಲ್ಲಿ ಸಮಾಜವಾದಿ ಪಕ್ಷದ ಸಂಘಟನೆ ಕಟ್ಟಿದವರಲ್ಲಿ ಪ್ರಮುಖರು. 1952ರಲ್ಲಿ ಡಾ.ರಾಮಮನೋಹರ ಲೋಹಿಯಾ ಅವರನ್ನು ರೋಣ ತಾಲ್ಲೂಕಿಗೆ ಕರೆಯಿಸಿ ಗಜೇಂದ್ರಗಡ, ಸೂಡಿ ಮತ್ತು ರೋಣದಲ್ಲಿ ಬಹಿರಂಗ ಸಭೆ ನಡೆಸಿದ್ದರು.

ಕರ್ನಾಟಕ ಏಕೀಕರಣಕ್ಕಾಗಿ ಅಂದಾನಪ್ಪ ದೊಡ್ಡಮೇಟಿ ಅವರ ಹಿರಿತನದಲ್ಲಿ ಗಡಿಭಾಗಕ್ಕೆ ತೆರಳಿ ಕನ್ನಡದ ಪ್ರಚಾರ ಕಾರ್ಯ ನಡೆಸಿದರು. 1953ರಲ್ಲಿ ಹುಬ್ಬಳ್ಳಿಯಲ್ಲಿ ಅದರಗುಂಚಿ ಶಂಕರಗೌಡರು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಏಕೀಕರಣ ಚಳವಳಿವಲ್ಲಿ ಇವರು ಸಲ್ಲಿಸದ ಸೇವೆ ಗುರುತಿಸಿ ಸರ್ಕಾರ 2006ರಲ್ಲಿ ಇವರಿಗೆ `ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ~ ನೀಡಿ ಗೌರವಿಸಿದೆ. ವಿರೂಪಾಕ್ಷಪ್ಪ ಅವರ `ಬದುಕು-ಬರಹ~ ಕುರಿತ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತು 2010ರಲ್ಲಿ ಗದುಗಿನಲ್ಲಿ ನಡೆದ 72ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರತಂದಿದೆ.

ಸಮಾಧಿ ಸ್ಥಳ ಅಭಿವೃದ್ಧಿ: ಸಮಾಧಿ ಸ್ಥಳ ಅಭಿವೃದ್ಧಿ ನಿರ್ಲಕ್ಷ್ಯದಿಂದ ಅಬ್ಬಿಗೇರಿ ಅವರ ಕುಟುಂಬದವರಿಗೆ ಬೇಸರವಾಗಿತ್ತು. ಪಡಿಸುವುದಾಗಿ ಹೇಳಿದ್ದ ಆಡಳಿತದ ನಿರ್ಲಕ್ಷ್ಯದಿಂದ ಆಂತರಿಕವಾಗಿ ಬಹಳಷ್ಟು ನೊಂದುಕೊಂಡಿದ್ದ ಅಬ್ಬಿಗೇರಿ ಕುಟುಂಬದವರು, ಈ ವರೆಗೆ ಕಾದು ಕಾದು ಸುಸ್ತಾಗಿ ಕೊನೆಗೆ ಇದೀಗ ತಾವೇ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಸಮಾಧಿ ಸ್ಥಳದ ಸುತ್ತ ಉದ್ಯಾನ ನಿರ್ಮಿಸಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.