ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ 1,327 ಮನೆ ನಿರ್ಮಾಣ

20ರವರೆಗೆ ‘ಸಾಮಾಜಿಕ ನ್ಯಾಯ ಪಾಕ್ಷಿಕ’
Last Updated 8 ಏಪ್ರಿಲ್ 2022, 15:03 IST
ಅಕ್ಷರ ಗಾತ್ರ

ಹಾಸನ: ‘ಬಿಜೆಪಿಯ 42ನೇ ಸಂಸ್ಥಾಪನಾ ದಿನದ ಅಂಗವಾಗಿ ಏ.7ರಿಂದ 20ರವರೆಗೆ ದೇಶದಾದ್ಯಂತ ‘ಸಾಮಾಜಿಕ ನ್ಯಾಯ ಪಾಕ್ಷಿಕ’ಆಚರಿಸಲಾಗುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಎಚ್‌.ಎಂ. ಸುರೇಶ್‌ ಕುಮಾರ್ ಹೇಳಿದರು.

‘ಎರಡು ವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನೇಕ ಯೋಜನೆಗಳಬಗ್ಗೆ ಮಾಹಿತಿ ನೀಡಲಾಗುವುದು. ಕೇಂದ್ರ ಸರ್ಕಾರ ಪ್ರಮುಖ ಮಿಷನ್‌2015ರ ಜೂನ್‌ 25ರಂದು ಪ್ರಾರಂಭಿಸಲಾಗಿದ್ದು, 2022ರ ವೇಳೆಗೆ ನಗರದಲ್ಲಿ ವಾಸಿಸುವ ಎಲ್ಲಾ ಕುಟುಂಬಗಳಿಗೆ ವಸತಿ ಕೊರತೆ ನೀಗಿಸುವ ಮಿಷನ್‌ ಇದಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಧಾನ ಮಂತ್ರಿ ಅವಾಸ್‌ ಯೋಜನೆಯಡಿ 2 ಕೋಟಿ ಮನೆ ನಿರ್ಮಿಸುವ ಗುರಿ ಇದೆ. ಈ ಮೂಲಕ ಬಡವರ ಸೂರು ಹೊಂದುವ ಕನಸನ್ನು ನನಸುಮಾಡಲಾಗುತ್ತಿದೆ. ಈ ಯೋಜನೆಯಡಿ ವಾರ್ಷಿಕ ಶೇ 6.5ರ ಬಡ್ಡಿ ದರದಲ್ಲಿ ಸಾಲ ಲಭ್ಯವಿದೆ’ ಎಂದರು.

‘ಫಲಾನುಭವಿಗಳನ್ನು ಸಾಮಾಜಿಕ ಮತ್ತು ಆರ್ಥಿಕ ಹಾಗೂ ಜಾತಿಜನಗಣತಿಯಿಂದ ಲಭ್ಯವಿರುವ ಮಾಹಿತಿ ಆಧಾರದಲ್ಲಿ ಗುರುತಿಸಲಾಗುತ್ತದೆ.ಪರಿಶಿಷ್ಟ ಜಾತಿ ಮತ್ತು ಪಂಗಡ, ಬಿಪಿಎಲ್‌ ಅಡಿಯಲ್ಲಿ ಎಸ್ಟಿ,ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಅರೆಸೇನಾ ಪಡೆ, ವಿಧವೆಯರು,ಮಾಜಿ ಸೈನಿಕರು ಫಲಾನುಭವಿಗಳಾಗಿರುತ್ತಾರೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಎಸ್‌.ಕೆ.ವೇಣುಗೋಪಾಲ್, ಗ್ರಾಮಾಂತರ ಮಂಡಲದ ಅಧ್ಯಕ್ಷ ರಂಗನಾಥ್‌, ಜಿಲ್ಲಾಮಾಧ್ಯಮ ಪ್ರಮುಖ್‌ ಐನೆಟ್‌ ವಿಜಯ್‌ಕುಮಾರ್‌, ಮುಖಂಡರಾದ ಬಿ.ವೇದಾವತಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT