ಬುಧವಾರ, ಅಕ್ಟೋಬರ್ 21, 2020
25 °C
9 ಮಂದಿ ಸಾವು, 273 ಜನರಿಗೆ ಕೋವಿಡ್‌

263 ಜನ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸನ ತಾಲ್ಲೂಕಿನ ಆರು ಜನ ಸೇರಿ 9 ಜನರು ಸಾವಿಗೀಡಾಗಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 241ಕ್ಕೆ ಏರಿಕೆಯಾಗಿದೆ.

ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 75 ವರ್ಷ, 65 ವರ್ಷ, 72 ವರ್ಷದ ಪುರುಷರು, 58 ವರ್ಷದ ಮಹಿಳೆ, 49 ವರ್ಷದ ಮಹಿಳೆ, 25 ವರ್ಷದ ಯುವಕ, ಹೊಳೆನರಸೀಪುರ ತಾಲ್ಲೂಕಿನ 58 ವರ್ಷದ ಪುರುಷ, ಅರಸೀಕೆರೆ ತಾಲ್ಲೂಕಿನ 80 ವರ್ಷದ ವೃದ್ಧೆ, ಬೇಲೂರು ತಾಲ್ಲೂಕಿನ 58 ವರ್ಷದ ಮಹಿಳೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಕಾರಿ ಡಾ. ಸತೀಶ್‌ ತಿಳಿಸಿದರು.

ಹೊಸದಾಗಿ 218 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 10,878ಕ್ಕೆ ಏರಿಕೆಯಾಗಿದೆ. ಬಿಡುಗಡೆಯಾದ 213 ಜನ ಸೇರಿ ಈವರೆಗೆ 7,718 ಮಂದಿ ಗುಣಮುಖರಾಗಿದ್ದಾರೆ. 2,919 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಕೇರ್‌ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 50 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಹೊಸದಾಗಿ ಅರಸೀಕೆರೆ 24, ಚನ್ನರಾಯಪಟ್ಟಣ 20, ಆಲೂರು 17, ಹಾಸನ 113, ಹೊಳೆನರಸೀಪುರ 17, ಅರಕಲಗೂಡು 7, ಬೇಲೂರು 6, ಸಕಲೇಶಪುರ 14 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.