ಶನಿವಾರ, ಅಕ್ಟೋಬರ್ 31, 2020
20 °C

₹3.24 ಲಕ್ಷ ಮೌಲ್ಯದ ಗಾಂಜಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ತಾಲ್ಲೂಕಿನ ಚಾಕೇನಹಳ್ಳಿಯ ಮೆನೆಯ ಮೇಲೆ ಅಬಕಾರಿ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿ ₹3.24 ಲಕ್ಷ ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಹಳೆಕೋಟೆ ಹೋಬಳಿಯ ಚಾಕೇನಹಳ್ಳಿ ಗ್ರಾಮದ ಪ್ರಕಾಶ ಎಂಬುವವರ ಮನೆ ಮೇಲೆ ದಾಳಿ ನಡೆಸಿ ₹72 ಸಾವಿರ  ಬೆಲೆಯ 2 ಕೆ.ಜಿ ಗಾಂಜಾ ಹಾಗೂ ಜಮೀನಿನಲ್ಲಿ ಬೆಳೆದಿದ್ದ ₹2.52 ಲಕ್ಷ ಬೆಲೆ ಬಾಳುವ 7 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ಉಪ ಆಯುಕ್ತ ಪಿ.ಗೋಪಾಲಕೃಷ್ಣೇಗೌಡ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಚ್.ಎಂ.ರಘು ನೇತೃತ್ವದಲ್ಲಿ ವಲಯ ಅಬಕಾರಿ ನಿರೀಕ್ಷಕ ಶಂಕರಪ್ಪ, ಉಪ ನಿರೀಕ್ಷಕ ಎಸ್.ದೀಪಕ್, ಸಿಬ್ಬಂದಿಗಳಾದ ನಜರುದ್ದೀನ್ ಮುಜಾವರ, ಎ.ಎಂ. ಧ್ರುವಕುಮಾರ್, ಬಿ.ಎಸ್.ಪ್ರಮೋದ್, ವಾಹನ ಚಾಲಕ ಪುನೀತ್ ಕಾರ್ಯಾಚರಣೆಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.