ಹಾಸನ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸೂರಜ್ ರೇವಣ್ಣ ಒಟ್ಟು ₹ 61.68 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. 33 ವರ್ಷದ ಸೂರಜ್ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿ ಜೊತೆಗೆ ₹ 14.97 ಕೋಟಿ ಸಾಲವಿದೆ ಎಂದೂ ನಮೂದಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ , ಹಾಸನ ಜಿಲ್ಲೆಯ ಪಡುವಲಹಿಪ್ಪೆ, ಗೌರಿಪುರ ಸೇರಿದಂತೆ 36 ಸ್ಥಳಗಳಲ್ಲಿ ₹ 34.06 ಕೋಟಿ ಕೃಷಿ ಭೂಮಿ, ₹ 13.53 ಕೋಟಿ ಕೃಷಿಯೇತರ ಭೂಮಿ , ₹14.07 ಕೋಟಿ ವಾಣಿಜ್ಯ ಕಟ್ಟಡಗಳ ಒಡೆಯರಾಗಿದ್ದಾರೆ.

ಅಲ್ಲದೇ ₹17.29 ಲಕ್ಷ , ₹ 42.04 ಕೋಟಿ ಬ್ಯಾಂಕ್‍ಗಳಲ್ಲಿ ಠೇವಣಿ, ₹ 2.53 ಕೋಟಿ ಅಂಚೆ ಕಚೇರಿ, ವಿವಿಧ ಕಂಪನಿಗಳ ಶೇರುಗಳಲ್ಲಿ ಹೂಡಿಕೆ ಮಾಡಿರುವುದಾಗಿ ವಿವರ ನೀಡಿದ್ದಾರೆ.

ಚರಾಸ್ತಿಗಳ ಪೈಕಿ 12 ಕೆ.ಜಿ ಬೆಳ್ಳಿ (₹ 7.72 ಲಕ್ಷ) ಒಂದು ಕೆ.ಜಿ ಚಿನ್ನ (₹ 45.75 ಲಕ್ಷ) , 36 ಹಸುಗಳು ( ₹ 15.91 ಲಕ್ಷ ), 8 ಎಮ್ಮೆಗಳು, 6 ಎತ್ತುಗಳು ( ₹3.20 ಲಕ್ಷ ) ಸೇರಿ ₹3.53 ಲಕ್ಷ ಚರಾಸ್ತಿ ಯ ವಿವರ ನೀಡಿದ್ದಾರೆ.

ಎಂ.ಶಂಕರ್; ₹ 20 ಕೋಟಿ ಆಸ್ತಿ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಯ ಪಟ್ಟಣದ ಎಂ. ಶಂಕರ್ ಅವರು ಒಟ್ಟು ₹ 20 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

57 ವರ್ಷದ ಎಂ. ಶಂಕರ್ ಅವರ ಬಳಿ ₹3 ಕೋಟಿ ಕೃಷಿ ಭೂಮಿ, ₹8 ಕೋಟಿ ಕೃಷಿಯೇತರ ಭೂಮಿ, ₹7 ಕೋಟಿ ವಾಣಿಜ್ಯ ಕಟ್ಟಡಗಳು, ₹1.13 ಕೋಟಿ ವಾಸದ ಮನೆ ಸೇರಿ ಸುಮಾರು ₹20 ಕೋಟಿ ಆಸ್ತಿ ಇದೆ.

₹ 20 ಲಕ್ಷ ನಗದು, ಪತ್ನಿ ಬಳಿ ₹10 ಲಕ್ಷ ನಗದು, ಕಾರುಗಳು ಸೇರಿ ಒಟ್ಟು 7 ವಾಹನಗಳು, ತಮ್ಮ ಬಳಿ ₹ 29.28 ಲಕ್ಷ ಚಿನ್ನಾಭರಣ ಸೇರಿ ₹ 1.92 ಕೋಟಿ ಚರಾಸ್ತಿ, ಪತ್ನಿ ಬಳಿ ₹ 35 ಲಕ್ಷ ಚಿನ್ನಾಭರಣ ಸೇರಿ ₹ 77 ಲಕ್ಷ ಚರಾಸ್ತಿ ಯಿದೆ ಎಂದು ವಿವರ ನೀಡಿದ್ದಾರೆ.

ವಿಶ್ವನಾಥ್ ಆಸ್ತಿ
₹ 4 ಕೋಟಿ

ಬಿಜೆಪಿ ಅಭ್ಯರ್ಥಿ 68 ವರ್ಷದ ಎಚ್.ಎಂ. ವಿಶ್ವನಾಥ್ ಅವರು ನಾಮಪತ್ರದೊಂದಿಗೆ ₹ 3.83 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

₹50 ಸಾವಿರ ನಗದು, ಪತ್ನಿ ಬಳಿ ₹20 ಸಾವಿರ ನಗದು, ಬ್ಯಾಂಕ್‍ನಲ್ಲಿ ₹ 6.77 ಲಕ್ಷ ಠೇವಣಿ, ಪತ್ನಿಯ ಬ್ಯಾಂಕ್ ಖಾತೆಯಲ್ಲಿ ₹1.38 ಲಕ್ಷ ಠೇವಣಿಯಿದೆ ಎಂದು ವಿವರ ನೀಡಿದ್ದಾರೆ. ಅಲ್ಲದೇ ಒಂದು ಇನ್ನೋವಾ ಕಾರು, ಒಂದು ಜೀಪ್, ಒಂದು ಟ್ರ್ಯಾಕ್ಟರ್, ಒಂದು ಬೈಕ್ , 500 ಗ್ರಾಂ ಚಿನ್ನ (₹ 20 ಲಕ್ಷ), 1300 ಗ್ರಾಂ ಬೆಳ್ಳಿ ಸೇರಿ ₹ 27 ಲಕ್ಷ ಚಿನ್ನಾಭರಣ ಇದೆ. ಸ್ಥಿರಾಸ್ತಿಯಲ್ಲಿ 20 ಎಕರೆ ಕಾಫಿ ತೋಟ, 20 ಎಕರೆ ಅಡಕೆ ತೋಟ, ಪತ್ನಿ ಹೆಸರಲ್ಲಿ 13 ಎಕರೆ ಕಾಫಿ ತೋಟ, ಬೆಂಗಳೂರು ಜಿಲ್ಲೆಯಲ್ಲಿ 11.53 ಲಕ್ಷ ರೂ. ಭೂಮಿ / ನಿವೇಶನ ಇದೆ ಎಂದು ಸ್ಥಿರಾಸ್ತಿ ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.