ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಪುರಸಭೆ: ಉಳಿತಾಯ ಬಜೆಟ್ ಮಂಡನೆ

Last Updated 1 ಮಾರ್ಚ್ 2012, 5:05 IST
ಅಕ್ಷರ ಗಾತ್ರ

ಬೇಲೂರು:  ಇಲ್ಲಿನ ಪುರಸಭೆಯ 2012-13ನೇ ಸಾಲಿಗಾಗಿ ರೂ. 2.44 ಕೋಟಿ ಉಳಿತಾಯ ಬಜೆಟ್‌ನ್ನು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಅವರು ಬುಧವಾರ ನಡೆದ ಬಜೆಟ್ ಅಧಿವೇಶನದಲ್ಲಿ ಮಂಡಿಸಿದರು.

ವಿವಿಧ ಮೂಲಗಳಿಂದ ರೂ.10.75 ಕೋಟಿ  ಆದಾಯ ನಿರೀಕ್ಷೆ ಮಾಡಿರುವ ಅಧ್ಯಕ್ಷರು ಅಭಿವೃದ್ಧಿ ಕಾರ್ಯಗಳು ಸೇರಿದಂತೆ ವಿವಿಧ ಬಾಬುಗಳಿಗೆ 8.30 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿದ್ದಾರೆ.

ಪ್ರಮುಖವಾಗಿ ಕಟ್ಟಡದ ಬಾಡಿಗೆಗಳಿಂದ 70 ಲಕ್ಷ, ಅಭಿವೃದ್ಧಿ ಶುಲ್ಕ 10 ಲಕ್ಷ, ಟೆಂಡರ್ ಫಾರಂ ಮಾರಾಟದಿಂದ 10 ಲಕ್ಷ, ಸಂತೆ ಹರಾಜಿನಿಂದ 5ಲಕ್ಷ, ನೀರಿನ ತೆರಿಗೆ ಮೂಲಕ 22ಲಕ್ಷ, ಆಸ್ತಿ ತೆರಿಗೆಯಿಂದ 35.73ಲಕ್ಷ, ಬೀದಿ ದೀಪ ಮತ್ತು ನೀರು ಸರಬರಾಜು ಸ್ಥಾನವ  ವಿದ್ಯುತ್ ಬಿಲ್ ಪಾವತಿಗೆ ಸರ್ಕಾರದ ನಿರೀಕ್ಷಣೆ ಮೇರೆ 65 ಲಕ್ಷ, ಸರ್ಕಾರದಿಂದ ನಿರೀಕ್ಷಣೆ ಮೇರೆ ಅಭಿವೃದ್ಧಿ ಕಾರ್ಯಕ್ಕೆ ಅನಿರ್ಭಂದಿತ ಅನುದಾನ 1.21 ಕೋಟಿ, 13ನೇ ಹಣಕಾಸು ಯೋಜನೆ ಯಿಂದ 45 ಲಕ್ಷ, ಮುಖ್ಯಮಂತ್ರಿಗಳ ನಿಧಿಯಿಂದ ರೂ. 40 ಲಕ್ಷ ಹಣವನ್ನು ನಿರೀಕ್ಷಿಸಿದ್ದಾರೆ.

ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ, ಚರಂಡಿ ದುರಸ್ತಿಗೆ 12ಲಕ್ಷ, ಹೊಸದಾಗಿ ರಸ್ತೆ ನಿರ್ಮಾಣಕ್ಕೆ 35ಲಕ್ಷ, ಹೊಸದಾಗಿ ಚರಂಡಿ ನಿರ್ಮಾಣಕ್ಕೆ 35ಲಕ್ಷ, ಬೀದಿ ದೀಪ ವಿದ್ಯುತ್ ಬಿಲ್ ಪಾವತಿಗೆ 30ಲಕ್ಷ, ಬೀದಿ ದೀಪ ದುರಸ್ತಿ ಸಾಮಗ್ರಿಗೆ 15ಲಕ್ಷ, ಬೀದಿ ದೀಪ ಹೊರಗುತ್ತಿಗೆ ಬಿಲ್ ಪಾವತಿಗೆ 15ಲಕ್ಷ, ಟ್ರ್ಯಾಕ್ಟರ್ ದುರಸ್ತಿ, ಜಮೀನು ಖರೀದಿ, ಕಸ ಬೇರ್ಪಡಿಸುವಿಕೆಗಾಗಿ 65 ಲಕ್ಷ, ಸ್ವಚ್ಚತೆ ಹೊರ ಗುತ್ತಿಗೆಗೆ 30 ಲಕ್ಷ, ನೀರು ಸರಬರಾಜು ವಿದ್ಯುತ್ ಬಿಲ್ ಪಾವತಿಗೆ 50 ಲಕ್ಷ, ನೀರು ಸರಬ ರಾಜು ಯಂತ್ರಗಳ ಖರೀದಿಗೆ 10 ಲಕ್ಷ, ನೀರು ಸರಬ ರಾಜು ಸಾಮಗ್ರಿ ಖರೀದಿ, ದುರಸ್ತಿ ನಿರ್ವಹಣೆಗೆ 15ಲಕ್ಷ, ನೀರು ಸರಬರಾಜು ಹೊರಗುತ್ತಿಗೆಗೆ 18 ಲಕ್ಷ, ಒಳಚರಂಡಿ ನಿರ್ಮಾಣ ಮತ್ತು ದುರಸ್ತಿಗೆ 5 ಲಕ್ಷ, ಉದ್ಯಾನವನ ಅಭಿವೃದ್ಧಿಗೆ 3ಲಕ್ಷ, ಪರಿಶಿಷ್ಟ ಜಾತಿ,ಪಂಗಡಗಳ ಕಲ್ಯಾಣಕ್ಕಾಗಿ ಶೇ.22.75 ಯೋಜನೆಯಡಿ 54.65ಲಕ್ಷ, ಬಡಜನರ ಕಲ್ಯಾಣಕ್ಕಾಗಿ ಶೇ 7.25 ಯೋಜನೆಯಡಿ 7.20ಲಕ್ಷ, ಅಂಗವಿಕಲರ ಕಲ್ಯಾಣಕ್ಕೆ 7.20ಲಕ್ಷ, ಕ್ರೀಡೆಗೆ 40ಲಕ್ಷ, ರುದ್ರಭೂಮಿ ಅಭಿವೃದ್ಧಿಗೆ 5 ಲಕ್ಷ, ಪುರಸಭಾ ಕಚೇರಿ ಕಟ್ಟಡ ನಿರ್ಮಾಣಕ್ಕೆ 40ಲಕ್ಷ, ಕಸಾಯಿಖಾನೆ ನಿರ್ಮಾಣಕ್ಕೆ 40 ಲಕ್ಷ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 32ಲಕ್ಷ ಮತ್ತು ಎಸ್.ಟಿ.ಪಿ. ಸೀವೆಜ್ ಟ್ರೀಟ್‌ಮೆಂಟ್‌ಗೆ ರೂ.5ಲಕ್ಷ ಖರ್ಚು ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದರು.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಜಿ.ಶಾಂತಕುಮಾರ್ ಉದ್ಯಾನವನ ಅಭಿವೃದ್ಧಿಗೆ ಕೇವಲ  3ಲಕ್ಷ ಹಣ ಇಟ್ಟಿರುವುದಕ್ಕೆ ಆಕ್ಷೆಪ ವ್ಯಕ್ತಪಡಿಸಿದರಲ್ಲದೆ, ಕನಿಷ್ಠ 50 ಲಕ್ಷ ಹಣ ಮೀಸಲಿಡುವಂತೆ ಒತ್ತಾಯಿಸಿದರು. ಪಟ್ಟಣದ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ವಚ್ಚತೆಗೆ ಇಟ್ಟಿರುವ ಹಣ ಕಡಿಮೆಯಾಯಿತು ಎಂದು ಸದಸ್ಯ ಎಂ.ಗುರುಪಾದಸ್ವಾಮಿ ಹೇಳಿದರೆ, ಸದಸ್ಯ ಎಚ್.ಎಂ.ದಯಾನಂದ್ ನೀರು ಸರಬರಾಜು ವಿಭಾಗಕ್ಕೆ ಬಳಸುವ ಆಲಂ, ಬ್ಲೀಚಿಂಗ್ ಪೌಡರ್ ಖರೀದಿಗೆ ಕೇವಲ 2.5ಲಕ್ಷ ಹಣ ಮೀಸಲಿಡಲಾಗಿದೆ. ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಶವ ಸಾಗಿಸುವ ವಾಹನ ಖರೀದಿಗೆ ಹಣ ಮೀಸಲಿಡಿ ಎಂದರು. ಸದಸ್ಯ ಬಿ.ಸಿ.ಮಂಜುನಾಥ್ ಕಳೆದ ವರ್ಷ ಪುರಸಭೆಯ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಹಣ ಬಳಕೆಯಾಗಿಲ್ಲ, ಈ ವರ್ಷವಾದರೂ ಕಟ್ಟಡ ನಿರ್ಮಿಸಿ ಎಂದು ಆಗ್ರಹಿಸಿದರು.
 
ರುದ್ರಭೂಮಿ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಿ ಎಂದು ಸದಸ್ಯ ಬಿ.ಎಲ್.ಧರ್ಮೇಗೌಡ ಹೇಳಿದರೆ, ಸದಸ್ಯ ಬಿ.ಡಿ.ಚನ್ನಕೇಶವ ಕ್ರೀಡೆಗೆ ನಿಗಧಿ ಪಡಿಸಿರುವ ಹಣ ಯಾವುದಕ್ಕೂ ಸಾಲುವುದಿಲ್ಲ ಹೆಚ್ಚಿನ ಉತ್ತೇಜನ ನೀಡಿ ಎಂದು ಒತ್ತಾಯಿಸಿ ದರು. ಉಪಾಧ್ಯಕ್ಷೆ ಅಮೀನಾ, ಮುಖ್ಯಾಧಿಕಾರಿ ಆರ್.ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT