ಸಕಲೇಶಪುರ: ಪಟ್ಟಣದ ಚಂಪಕನಗರ ಬಡಾವಣೆಯ ರಸ್ತೆಯಲ್ಲಿ ಶುಕ್ರವಾರ ನಡೆದು ಹೋಗುತ್ತಿದ್ದ 9 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಶಿಕ್ಷಕಿಯೊಬ್ಬರ ಸ್ಥಿತಿ ಗಂಭೀರವಾಗಿದೆ.

ರೋಟರಿ ಆಂಗ್ಲ ಶಾಲೆಯ ಶಿಕ್ಷಕಿ ಕೋಮಲಾ ಹಾಗೂ ಇತರ ಶಿಕ್ಷಕರು ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹೆಜ್ಜೇನುಗಳು ದಾಳಿ ಮಾಡಿವೆ.

ಆಟೋ ಚಾಲಕ ರವಿ, ಶಾಲೆಯ ವಾಚ್ಮನ್ ಭಾಸ್ಕರ್, ಶಾಲೆಯ ಮುಂಭಾಗದ ಮನೆಯ ನಿವಾಸಿ ವರ್ಗೀಸ್ ಅವರಿಗೂ ಸಹ ಜೇನು ಹುಳುಗಳು ಕಚ್ಚಿವೆ. ಎಲ್ಲರನ್ನೂ ತಕ್ಷಣ ಕ್ರಾಫರ್ಡ್ ಸರ್ಕಾರಿ ಆಸ್ಪತ್ರಯಲ್ಲಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.

‘ಕೋಮಲಾ ಅವರಿಗೆ ಹೆಚ್ಚು ಜೇನುಗಳು ಕಚ್ಚಿದ್ದರಿಂದ ಅವರ ಸ್ಥಿತಿ ಗಂಭೀರವಾಗಿದ್ದು, ಚೇತರಿಸಿಕೊಳ್ಳಲಿದ್ದಾರೆ’ ಎಂದು ಚಿಕಿತ್ಸೆ ನೀಡಿದ ವೈದ್ಯ ಡಾ.ಎಂ.ಎಸ್. ಮಧುಸೂದನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.