ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬೆಳಗೀಹಳ್ಳಿ: ಭಕ್ತಿ– ಭಾವದ ರಂಗದ ಹಬ್ಬ

ಕಂಬದ ನರಸಿಂಹಸ್ವಾಮಿ ದೇಗುಲದಲ್ಲಿ ಒಂದು ವಾರ ವಿಶೇಷ ಆಚರಣೆ
Published : 25 ಮಾರ್ಚ್ 2024, 7:36 IST
Last Updated : 25 ಮಾರ್ಚ್ 2024, 7:36 IST
ಫಾಲೋ ಮಾಡಿ
Comments
ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿಯ ಕಂಬದ ನರಸಿಂಹಸ್ವಾಮಿ ದೇವಸ್ಥಾನ
ಹಿರೀಸಾವೆ ಹೋಬಳಿಯ ಬೆಳಗೀಹಳ್ಳಿಯ ಕಂಬದ ನರಸಿಂಹಸ್ವಾಮಿ ದೇವಸ್ಥಾನ
ಬೆಳಗೀಹಳ್ಳಿ ಹಬ್ಬದಲ್ಲಿ ಸ್ವಾಮಿಯ ಉತ್ಸವದಲ್ಲಿ ಬಸವಣ್ಣನ ಮೆರವಣಿಗೆ (ಸಂಗ್ರಹ ಚಿತ್ರ)
ಬೆಳಗೀಹಳ್ಳಿ ಹಬ್ಬದಲ್ಲಿ ಸ್ವಾಮಿಯ ಉತ್ಸವದಲ್ಲಿ ಬಸವಣ್ಣನ ಮೆರವಣಿಗೆ (ಸಂಗ್ರಹ ಚಿತ್ರ)
40 ಗ್ರಾಮದಲ್ಲಿ ವಾಸ ಇರುವ ಸ್ವಾಮಿಯ ಭಕ್ತರು ಹಬ್ಬದಲ್ಲಿ ಭಾಗಿಯಾಗಿ ಧಾರ್ಮಿಕ ಆಚರಣೆಗೆ ಸಹಕರಿಸುತ್ತಾರೆ
ದೇವರಾಜು ದೇವಸ್ಥಾನದ ಗುಡಿಗೌಡರು ಬೆಳಗೀಹಳ್ಳಿ
ಗ್ರಾಮ ಮತ್ತು ದೇವಸ್ಥಾನದ ಹಿನ್ನೆಲೆ
ಮಂಡ್ಯ ಜಿಲ್ಲೆಯ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿಯ ಅರ್ಚಕರು ಗೋವುಗಳನ್ನು ಸಾಕಿದ್ದರು. ಅವುಗಳನ್ನು ಈ ಸ್ಥಳದಲ್ಲಿ ಮೇಯಿಸುತ್ತಿದ್ದರು. ಒಂದು ಬಿಳಿ ಹಸು ಸಂಜೆ ಸಮಯದಲ್ಲಿ ದನಗಳಿಂದ ದೂರ ಹೋಗಿ ಹುತ್ತ ಒಂದರ ಮೇಲೆ ನಿಂತು ಹಾಲನ್ನು ಅದರೊಳಕ್ಕೆ ಸುರಿಸುತ್ತಿತ್ತು. ಈ ದೃಶ್ಯವನ್ನು ನೋಡಿದ ದನ ಕಾಯುವವನು ಮನೆಯವರಿಗೆ ತಿಳಿಸಿದ. ಇದೇ ರೀತಿಯ ಕನಸು ಸಹ ಆದೇ ದಿನ ಹಸುವಿನ ಮಾಲೀಕರಿಗೆ ಬಿತ್ತು. ಮರುದಿನ ಈ ಜಾಗಕ್ಕೆ ಬಂದು ಸಂಜೆಯಿಂದ ಹುತ್ತದ ಸುತ್ತ ಬಿದ್ದಿದ್ದ ತರಗನ್ನು (ಮರದ ಒಣಗಿದ ಎಲೆಗಳು) ಸ್ವಚ್ಛ ಮಾಡಿ ಬೆಳಗಿನ ಜಾವದ ಸಮಯಕ್ಕೆ ಸಣ್ಣ ದೇವಸ್ಥಾನ ನಿರ್ಮಾಣ ಮಾಡಿದರು. ಬೆಳಗಿನ ಬೆಳಕಿಗೆ ಬಂದ ಗ್ರಾಮವೇ ‘ಬೆಳಗೀಹಳ್ಳಿ’ ಮತ್ತು ಶಾಸನಗಳ ಪ್ರಕಾರ ಜೈನ ಧರ್ಮದ ಗ್ರಾಮ ಎಂಬ ಐತಿಹ್ಯವಿದೆ ಎಂದು ಗ್ರಾಮದ ಶಿಕ್ಷಕ ಗೋವಿಂದಯ್ಯ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT