ಬಾಗೂರು (ನುಗ್ಗೇಹಳ್ಳಿ): ಹೋಬಳಿಯ ಅಣತಿ- ವಳಗೇರಹಳ್ಳಿ ಕೆರೆಯಲ್ಲಿ ಬೀರಲಿಂಗೇಶ್ವರ ಸ್ವಾಮಿ ಅಣತಿ ಲಕ್ಷ್ಮೀದೇವಿ ಬೀಚ ಗೋಡನಹಳ್ಳಿ ಮಾರುತಿ ಸ್ವಾಮಿ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರ ವೈಭವದ ವೈಭವದ ತೆಪ್ಪೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಹೋಬಳಿಯ ವಳಗೇರಹಳ್ಳಿ ಗ್ರಾಮದಲ್ಲಿ ವೈದ್ಯನಾಥೇಶ್ವರ ಸ್ವಾಮಿ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ಮಹಾಗಣಪತಿ ಹಾಗೂ ಬಸವೇಶ್ವರ ಸ್ವಾಮಿಯವರ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ವಳಗೇರಹಳ್ಳಿ ವೈದ್ಯನಾಥೇಶ್ವರ ಸ್ವಾಮಿ, ಕಾಲಭೈರವೇಶ್ವರ ಸ್ವಾಮಿ, ಲಕ್ಷ್ಮಿದೇವಿ ಕಳಸ ಸ್ಥಾಪನೆಯೊಂದಿಗೆ ವೈಭವದ ತೆಪ್ಪೋತ್ಸವ ನೆರವೇರಿತು.

ಕೆರಗೋಡಿ ರಂಗಾಪುರ ಮಠದ ಗುರು ಪರದೇಶಿ ಕೇಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿ.ಪಂ.ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ವಿಶೇಷಪೂಜೆ ಸಲ್ಲಿಸಿದರು.

ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ತೆಪ್ಪೋತ್ಸವ ನಡೆಯುತ್ತಿರುವುದರಿಂದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಅಭಿಷೇಕ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.

ಸುಮಾರು 900 ಎಕರೆ ಪ್ರದೇಶದಲ್ಲಿ ಕೆರೆ ಇರುವುದರಿಂದ ಅಗ್ನಿಶಾಮಕ ದಳದ ಹಾಗೂ ಪೊಲೀಸರು ಹೆಚ್ಚಿನ ಜಾಗೃತಿ ವಹಿಸಿದ್ದರು.

ತೆಪ್ಪೋತ್ಸವ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಂಕ್ರಪ್ಪ, ತಾಲ್ಲೂಕು ಅರ್ಚಕರ ಸಂಘದ ಶ್ರೀಧರ್ ಮೂರ್ತಿ, ಗ್ರಾ.ಪಂ. ಅಧ್ಯಕ್ಷ ಶ್ರೀಧರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎನ್. ಮಂಜುನಾಥ್, ಕಾಂಗ್ರೆಸ್ ಯುವ ಮುಖಂಡ ಶಶಾಂಕ್ ಗೋಪಾಲಸ್ವಾಮಿ, ಮುಖಂಡರಾದ ಅಣತಿ ವೆಂಕಟೇಶ್, ಕೋಡಿಹಳ್ಳಿ ರವಿ, ಧರ್ಮರಾಜ್, ಉದ್ಯಮಿಗಳಾದ ಅಣತಿ ಯೋಗೇಶ್, ಮರುವನಹಳ್ಳಿ ದೇವರಾಜ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.