ಅರಸೀಕೆರೆ | ಇಂದಿನಿಂದ ಜೇನುಕಲ್ಲು ಸಿದ್ಧೇಶ್ವರ ಜಾತ್ರೆ: ಲಕ್ಷಾಂತರ ಭಕ್ತರು ಭಾಗಿ
ರಮೇಶ್ ಎ.ಎಸ್.
Published : 12 ಏಪ್ರಿಲ್ 2025, 7:35 IST
Last Updated : 12 ಏಪ್ರಿಲ್ 2025, 7:35 IST
ಫಾಲೋ ಮಾಡಿ
Comments
ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ಧೇಶ್ವರಸಾಮಿ ಪಾದುಕೆ ಇರುವ ಮಂಟಪ.
ಶನಿವಾರ ಮಧ್ಯಾಹ್ನ ಹಾರನಹಳ್ಳಿ ಗ್ರಾಮದಲ್ಲಿ ದೇವರಿಗೆ ಮದಲಿಂಗ ಶಾಸ್ತ್ರ ಅದ್ದೂರಿ ಕರ್ಪೂರ ಸೇವೆ; ನಂತರ ಯಾದಾಪುರ ಪ್ರವೇಶ
ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯ ಮಹಿಮೆ ಅಪಾರವಾಗಿದ್ದು ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಶಿವಲಿಂಗೇಗೌಡ ಆದ್ಯತೆ ನೀಡಿದ್ದಾರೆ.
ಗೀಜಿಹಳ್ಳಿ ಧರ್ಮಶೇಖರ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ಕ್ಷೇತ್ರಕ್ಕೆ ತನ್ನದೇ ಆದ ಮಹಿಮೆ ಇದ್ದು ಪ್ರತಿ ಹುಣ್ಣಿಮೆಗೆ ಸಹಸ್ರಾರು ಭಕ್ತರು ಬರುತ್ತಾರೆ. ನಿತ್ಯ ದಾಸೋಹ ನಡೆಯುತ್ತಿದೆ. ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ.
ದರ್ಶನ್ ಅರಸೀಕೆರೆ ನಗರಸಭೆ ಸದಸ್ಯ
ಕ್ಷೇತ್ರಕ್ಕೆ ಯಗಚಿ ನೀರು
ಪ್ರತಿ ಹುಣ್ಣಿಮೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಅಪಾರ ಭಕ್ತಾದಿಗಳಿಗೆ ಹಾಗೂ ಇತರೆ ದಿನಗಳಲ್ಲಿ ನೀರಿನ ಅಭಾವ ತಲೆದೋರದಂತೆ ಯಗಚಿ ಜಲಾಶಯದಿಂದ ಕ್ಷೇತ್ರಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ಭಕ್ತಾದಿಗಳ ಸುಗಮ ಸಂಚಾರಕ್ಕೆ ಸುಸಜ್ಜಿತ ರಸ್ತೆಗೆ ಗಮನ ಹರಿಸಲಾಗಿದೆ. ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮಹಿಮೆ ಅಪಾರವಾಗಿದ್ದು ವೈಭವದ ಜಾತ್ರೆಯಲ್ಲಿ ಭಾಗವಹಿಸಿ ತಾಲ್ಲೂಕಿನ ಜನತೆಯ ಹಿತಕ್ಕೆ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.