ಶಾಂತಿ ಸ್ಥಾಪನೆಗಾಗಿ ಪ್ರತಿಷ್ಠಾಪನೆ ದಿನ
ವಿಂಧ್ಯಗಿರಿ ಪರ್ವತದ ಮೇಲೆ ಉತ್ತರಾಭಿಮುಖವಾಗಿ ಖಡ್ಗಾಸನ ಬಾಹುಬಲಿಯ 58.8 ಅಡಿ ಎತ್ತರ ಏಕಶಿಲಾ ವಿಗ್ರಹವನ್ನು ಕ್ರಿ.ಶ.981ರ ಚೈತ್ರ ಶುದ್ಧ ಪಂಚಮಿಯ ಮಾರ್ಚ್ 13 ರಂದು ಪ್ರತಿಷ್ಠಾಪಿಸಲಾಗಿದೆ.
12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವಂತೆ ವಿಗ್ರಹ ನಿರ್ಮಾಣ ಮಾಡಿಸಿದ ಗಂಗರಸರ ಮಂತ್ರಿ ಚಾವುಂಡರಾಯ ಅಭಿಪ್ರಾಯ ಪಟ್ಟಿದ್ದ. ಅದರಂತೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸಲಾಗುತ್ತದೆ. ಶಾಂತಿ ಸ್ಥಾಪನೆಯ ಉದ್ದೇಶದಿಂದ ಈ ಪ್ರತಿಷ್ಠಾಪನಾ ದಿನವನ್ನು ವರ್ಷಕ್ಕೊಮ್ಮೆ ಚೈತ್ರ ಶುದ್ಧ ಪಂಚಮಿಯಂದು ಆಚರಿಸಲಾಗುತ್ತದೆ.