ಹಾಸನ: ಲೇಖಕಿ ಬಾನು ಮುಷ್ತಾಕ್ ಅವರು ಬುಧವಾರ ಇಲ್ಲಿನ ಹಾಸನಾಂಬ ದೇಗುಲಕ್ಕೆ ಬಂದು ದೇವಿಯ ದರ್ಶನ ಪಡೆದರು. ನಂತರ ಹೂವು ಮುಡಿದು, ಬಳೆ ತೊಟ್ಟು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಅವರು, ‘ಚಿಕ್ಕವಳಿದ್ದಾಗ ತಾಯಿಯ ಕೈ ಬೆರಳು ಹಿಡಿದು ಇಲ್ಲಿಗೆ ಬರುತ್ತಿದ್ದ ದಿನಗಳು ನೆನಪಾದವು. ಇಂದು ನಿಮ್ಮ ಗಮನಕ್ಕೆ ಬಂದಿದ್ದೇನೆ. ಅಂದೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಬರುತ್ತಿದ್ದರು. ಈಗಲೂ ಕೆಲವರು ಬರ್ತಾರೆ’ ಎಂದು ಹೇಳಿದರು.

‘ಹಿಂದೆ ಮುಸ್ಲಿಮರೂ ಹಾಸನಾಂಬೆಯನ್ನು ಪೂಜಿಸುತ್ತಿದ್ದರು. ತಾಯಿಯವರ ಕಾಲದಲ್ಲಿ ದೇವಿಯನ್ನು ಹಸನ್ ಬಿ, ಹುಸೇನ್ ಬೀ ಎಂಬ ನಂಬಿಕೆಯಲ್ಲಿ ಪರಿಚಯಿಸುತ್ತಿದ್ದರು. ಆ ಕಾಲದಲ್ಲಿ ಮುಸ್ಲಿಂ ಪೂಜೆಯಂತೆ ಸಕ್ಕರೆ, ಊದಿನ ಕಡ್ಡಿ ತಂದು ಪೂಜಿಸುತ್ತಿದ್ದರು’ ಎಂದು ಸ್ಮರಿಸಿದರು.

‘ಹಾಸನಾಂಬೆ ದೇಗುಲವು ಭಾವೈಕ್ಯದ ಜಾಗ. ಈ ಉತ್ಸವ ನಮ್ಮ ಊರಿನ ಹಬ್ಬ. ನಾವೆಲ್ಲರೂ ಈ ದೇವಿಯ ಜಾತ್ರೆಯಲ್ಲಿ ಸಂಭ್ರಮದಿಂದ ಭಾಗಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.