ಅರಕಲಗೂಡು: ಜೇನು ನೊಣಗಳು ಪರಿಸರಕ್ಕೆ ಪೂರಕವಾಗಿದ್ದು ಇವುಗಳ ಸಂತತಿ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಶಾಸಕ ಎ. ಮಂಜು ಆತಂಕ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜೇನುಹುಳು ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪರಾಗ ಸ್ಪರ್ಶ ಕ್ರಿಯೆ ಮೂಲಕ ಆಹಾರ ಉತ್ಪಾದನೆಯಲ್ಲಿ ಇವುಗಳ ಪಾತ್ರ ಮಹತ್ತರವಾಗಿದೆ. ಉತ್ತಮ ಗುಣಮಟ್ಟದ ಜೇನಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ. ರೈತರು ತಮ್ಮ ಜಮೀನಿನಲ್ಲಿ ಜೇನು ಸಾಕಣೆಯನ್ನು ಉಪ ಕಸುಬು ಮಾಡಿ, ಆದಾಯವನ್ನು ಹೆಚ್ಚಿಸಿ ಕೊಳ್ಳಬಹುದು. ಸರ್ಕಾರ ಜೇನು ಕೃಷಿ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ ಎಂದು ತಿಳಿಸಿದರು.

ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ಮಹದೇವ್ , ಕೃಷಿಯಲ್ಲಿ ಹೆಚ್ಚಿದ ರಸಾಯನಿಕ ಮತ್ತು ಕೀಟನಾಶಕಗಳ ಬಳಕೆ ಪರಿಣಾಮ ಜೇನು ಹುಳುವಿನಂತಹ ಉಪಯುಕ್ತ ಕೀಟಗಳ ಸಂತತಿ ಅಳಿಯುತ್ತಿದೆ. ರೈತರು ಜೇನು ಸಾಕಣೆ ಕೈಗೊಂಡರೆ ತಮ್ಮ ಕೃಷಿ ಇಳುವರಿಯನ್ನು ದ್ವಿಗುಣಗೊಳಿಸಬಹುದು ಎಂದರು.

ಸ್ಟಿಂಗ್ ಲೆಸ್ ಜೇನು ಕೃಷಿ ಕುರಿತು ಮಡಿಕೇರಿ ಅರಣ್ಯ ಸಂಶೋಧನಾ ಘಟಕದ ಉಪ ವಲಯ ಅರಣ್ಯಾಧಿಕಾರಿ ಚರಣ್ ಕುಮಾರ್, ಜೇನು ನೊಣದ ಮಹತ್ವ ಕುರಿತು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆರ್.ಎನ್ . ಕೆಂಚಾರೆಡ್ಡಿ, ಜೇನು ಕೃಷಿ ಕುರಿತು ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಡಿ. ರಾಜೇಶ್, ಜೇನಿನೊಂದಿಗೆ ಬದುಕು ಕುರಿತು ಬೆಂಗಳೂರಿನ ಹನಿ ಡೇ ಬೀ ಫಾರ್ಮ್ ಸಂಸ್ಥಾಪಕ ಬಿ.ವಿ.ಅಪೂರ್ವ ಮಾಹಿತಿ ನೀಡಿದರು.

ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ್, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ರೇಶ್ಮ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ರೋಟರಿ ಅಧ್ಯಕ್ಷ ಪ್ರಭು ಶ್ರಿಧರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ, ಉಪ ವಲಯ ಅರಣ್ಯಾಧಿಕಾರಿಗಳಾದ ಶಂಕರ್, ಲಕ್ಷ್ಮೀ ನಾರಾಯಣ್ ಇದ್ದರು. ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.

ಜೇನು ಸಂತತಿ ನಾಶವಾದಲ್ಲಿ ಮನುಷ್ಯ ಕುಲವೂ ನಾಶವಾಗುತ್ತದೆ ಎಂಬ ಜಾಗೃತಿ ಅಗತ್ಯ. ಔಷಧೀಯಗುಣಗಳನ್ನು ಹೊಂದಿರುವ ಜೇನು ಮನಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿದೆ.

ಪ್ರಪಂಚದಲ್ಲಿ ಕೆಡದಿರುವ ವಸ್ತು ಎಂದರೆ ಜೇನು ತುಪ್ಪ ಇದು ಹಳೆಯದಾದಷ್ಟೂ ಗುಣಮಟ್ಟ ಹೆಚ್ಚತ್ತದೆ. ಎ. ಮಂಜು ಶಾಸಕ

ಬಹುಮಾನ ವಿಜೇತರು ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜೇನುಹುಳು ದಿನಾಚರಣೆ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಫರ್ಧೆಯ ಕಾಲೇಜು ವಿಭಾಗದಲ್ಲಿ ಎಂ.ಎಚ್. ಪಂಚಮಿ (ಪ್ರಥಮ) ಎ.ಡಿ.ಜಸ್ಮಿತ (ದ್ವಿತೀಯ) ಲೀಲಾವತಿ (ತೃತೀಯ). ಪ್ರೌಢಶಾಲಾ ವಿಭಾಗದಲ್ಲಿ ಶೃತಿ (ಪ್ರಥಮ) ಎಚ್.ಆರ್.ತನುಶ್ರೀ (ದ್ವಿತೀಯ) ಲಕ್ಷ್ಮೀ (ತೃತೀಯ). ಪ್ರಬಂಧ ಸ್ಫರ್ಧೆಯಲ್ಲಿ ವಿದ್ಯಾಶ್ರೀ (ಪ್ರಥಮ) ಕೆ.ಆರ್.ರಕ್ಷಿತ (ದ್ವಿತೀಯ) ಎಸ್.ಕೆ.ಸಂತೋಷ್ (ತೃತೀಯ) ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.