ಬೇಲೂರು: ಪಡುವಳಲು ದೊಡ್ಡಕೆರೆ ಏರಿ ಎತ್ತರ ಮಾಡಿ ಕೆರೆ ಮುಂದಿನ ಕಾಲುವೆಯನ್ನು ₹30ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಪಡುವಳಲು ಗ್ರಾಮದಲ್ಲಿ ಸೋಮವಾರ ಕೆರೆ ಏರಿ ಕಾಲುವೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕಳೆದ ಒಂದೂವರೆ ವರ್ಷದ ಹಿಂದೆ ಈ ಗ್ರಾಮಕ್ಕೆ ಬಂದಾಗ ಮಳೆ ಹೆಚ್ಚಾಗಿ ಕೆರೆ ತುಂಬಿ ಏರಿ ಮೇಲೆ ನೀರು ಹರಿದು ಬಿರುಕು ಬಿಡುವಂತಾಗಿತ್ತು, ನಾಲೆಯಲ್ಲಿ ನೀರು ತುಂಬಿ ಜಲಾವೃತಗೊಂಡಿತ್ತು, ಅದನ್ನು ವೀಕ್ಷಣೆ ಮಾಡಿ ಆದಷ್ಟು ಬೇಗ ಶಾಶ್ವತ ಪರಿಹಾರ ದೊರಕಿಸಿಕೊಡುವುದಾಗಿ ಮಾತು ನೀಡಿದ್ದೆ, ಅದರಂತೆ ಇಂದು ಈ ಕೆರೆ ಏರಿ ಅಬಿವೃದ್ಧಿ ಹಾಗೂ 120ಮೀಟರ್ ನಾಲೆ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೆನೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸದಸ್ಯ ಉದಯ್ ಕುಮಾರ್, ಹರೀಶ್, ಗುತ್ತಿಗೆದಾರ ಗೋಪಾಲ್, ವಾಟೆಹೊಳೆ ಜಲಾಶಯದ ಸಹಾಯಕ ಎಂಜಿನಿಯರ್ ಸಂದೀಪ್, ಗ್ರಾಮಸ್ಥರಾದ ಮಲ್ಲೇಶ್, ಕಿರಣ್, ಚಂದನ್, ಭಾರತಿ, ಚಂದ್ರು, ತೀರ್ಥ, ಭೊಜೇಶ್, ಬಸವರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.