ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಲೂರು: ಒತ್ತುವರಿಯಾಗಿದ್ದ ಗ್ರಾಮಠಾಣಾ ಭೂಮಿ ತೆರವುಗೊಳಿಸಿದ ಅಧಿಕಾರಿಗಳು

Published : 1 ಅಕ್ಟೋಬರ್ 2024, 14:25 IST
Last Updated : 1 ಅಕ್ಟೋಬರ್ 2024, 14:25 IST
ಫಾಲೋ ಮಾಡಿ
Comments

ಬೇಲೂರು:  ಅರೇಹಳ್ಳಿ ಹೋಬಳಿ ಹೋಬಳಿಯಿ ಬ್ಯಾದನೆ ಗ್ರಾಮದಲ್ಲಿ ಖಾಸಗಿ ಕಾಫಿ ಎಸ್ಟೇಟ್ ಮಾಲೀಕರೊಬ್ಬರು  ಒತ್ತುವರಿ ಮಾಡಿಕೊಂಡಿದ್ದ ಗ್ರಾಮ ಠಾಣಾ ಪ್ರದೇಶವನ್ನು ತಹಶೀಲ್ದಾರ್ ಎಂ.ಮಮತಾ ಆದೇಶದಂತೆ ತೆರವುಗೊಳಿಸಲಾಯಿತು.

ನಾರ್ವೆ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ 1.36 ಎಕರೆ ಗ್ರಾಮಠಾಣಾವನ್ನು ತೆರವು ಮಾಡಿ ಪಂಚಾಯಿತಿಗೆ ನೀಡಿ ಎಂದು ಅತಿಕ್ರಮಣದಾರರಿಗೆ ತಿಳಿಹೇಳಲಾಗಿತ್ತು. ಅವರು ಜಾಗ ಬಿಟ್ಟುಕೊಡಲಿಲ್ಲ,  ಗ್ರಾಮಗಳ ವಸತಿ ರಹಿತರು ನಿವೇಶನವನ್ನು ಒದಗಿಸುವಂತೆ ಕೋರಿ ಒಟ್ಟು 180 ಅರ್ಜಿಗಳು ಬಂದಿವೆ ಎಂದರು.

ಮುಖಂಡ ಪೂರ್ಣೇಶ್ ಮಾತನಾಡಿ, ಬ್ಯಾದನೆ ಗ್ರಾಮದ  50 ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಗ್ರಾಮದ ಬಡಜನರಿಗೆ ನಿವೇಶನ ನೀಡಬೇಕಾಗಿದೆ. ಶಾಸಕರ ಹಾಗೂ ಅಧಿಕಾರಿಗಳ ಸಹಕಾರದಿಂದ ಗ್ರಾಮಠಾಣಾ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಗ್ರಾಮಠಾಣಾ ಪ್ರದೇಶವನ್ನು ಇದೇ ಗ್ರಾಮದ ಗ್ರಾಮಸ್ಥರಿಗೆ ಮೀಸಲಿಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

 ತೆರವು ಕಾರ್ಯಚರಣೆಯಲ್ಲಿ ಪಿಡಿಒ ಚಂದ್ರಯ್ಯ, ಕಾರ್ಯದರ್ಶಿ ಚಾಮರಾಜ್, ಆರ್‌ಐ ಚಂದ್ರೆಗೌಡ, ತಾಲ್ಲೂಕು ಪಂಚಯಿತಿ ಇಒ ವಸಂತ್ ಕುಮಾರ್, ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ,  ಸದಸ್ಯರಾದ ಮಲ್ಲಿಕಾರ್ಜುನ್ ನಾರ್ವೆ, ಚಿದಾನಂದ್, ಮಂಜುನಾಥ್, ಪವಿತ್ರ, ಬೇಬಿ, ವೀಣಾ, ಮುಖಂಡರಾದ ಇಸ್ಮಾಯಿಲ್, ಸೋಮಯ್ಯ, ನಿಂಗರಾಜು, ಪೊಲೀಸ್ ಅಧಿಕಾರಿಗಳು ಹಾಗೂ ಬ್ಯಾದನೆ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT