ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು | ಹೃದಯ ಕಂಪನ ನಿಯಂತ್ರಿಸುವ ಸಾಧನ ಉದ್ಘಾಟನೆ

Published 5 ಮಾರ್ಚ್ 2024, 13:34 IST
Last Updated 5 ಮಾರ್ಚ್ 2024, 13:34 IST
ಅಕ್ಷರ ಗಾತ್ರ

ಕೊಣನೂರು: ಪಟ್ಟಣದ ಸಮುದಾಯ ಕೇಂದ್ರದಲ್ಲಿ ₹1.75 ಲಕ್ಷ ಮೊತ್ತದ ಸ್ವಯಂಚಾಲಿತ ಬಾಹ್ಯ ಹೃದಯ ಕಂಪನ ನಿಯಂತ್ರಿಸುವ ಸಾಧನ ಹಾಗೂ ₹80 ಸಾವಿರ ಮೊತ್ತದ ಡೆಂಟಲ್ ಎಕ್ಸರೇ ಸಾಧನಕ್ಕೆ ಶಾಸಕ ಎ.ಮಂಜು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಹೃದಯಾಘಾತವಾದರೆ ಬೇರೆಡೆಗೆ ತಲುಪುವವರೆಗೆ ತೊಂದರೆಯಾಗದಂತೆ ತಡೆಗಟ್ಟಲು ಸ್ವಯಂಚಾಲಿತ ಬಾಹ್ಯ ಹೃದಯ ಕಂಪನ ನಿಂಯಂತ್ರಿಸುವ ಸಾಧನ ಅನುಕೂಲಕರ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದರು.

‘ಡೆಂಟಲ್ ಎಕ್ಸರೇ, ಹಲ್ಲು ಹೊರತೆಗೆಯುವಿಕೆ, ಹಲ್ಲು ಶುಚಿಗೊಳಿಸುವ ಸಾಧನಗಳೂ ಇದ್ದು, ಮುಂದಿನ ಒಂದು ವಾರದೊಳಗೆ ಸೌಲಭ್ಯ ದೊರಕಲಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುನಿಲ್, ದಂತ ವೈದ್ಯೆ ರಮ್ಯಾ, ವೈದ್ಯಾಧಿಕಾರಿ ಡಾ.ಸುದರ್ಶನ್, ಡಾ.ಪ್ರಿಯಾಂಕ, ನೇತ್ರಾಧಿಕಾರಿ ಶಶಿಕುಮಾರ್, ಆರೋಗ್ಯ ನಿರೀಕ್ಷಕ ಆನಂದಗೌಡ, ಗ್ರಾ.ಪಂ ಅಧ್ಯಕ್ಷೆ ಮಿಜ್ಬಾ ರಿಜ್ವಾನ್, ತಾ.ಪಂ ಮಾಜಿ ಸದಸ್ಯ ಇಮ್ರಾನ್ ಮೊಕ್ತಾರ್, ಮುಖಂಡ ಹರಿಗೌಡ, ಎಸ್.ನಾಗರಾಜ್, ಸುರೇಶ್, ವೆಂಕಟೇಶ್, ಸೋಮಶೇಖರ್, ರವಿಕುಮಾರ್ ಉಪಸ್ಥಿತರಿದ್ದರು.

ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡೆಂಟಲ್ ಎಕ್ಸರೇ ಸಾಧನವನ್ನು ಶಾಸಕ ಎ.ಮಂಜು ಚಾಲನೆ ನೀಡಿದರು.
ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡೆಂಟಲ್ ಎಕ್ಸರೇ ಸಾಧನವನ್ನು ಶಾಸಕ ಎ.ಮಂಜು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT