ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವಾರದಿಂದ ಬಜೆಟ್ ಸಿದ್ಧತೆ, ನೀರಾವರಿಗೆ ಆದ್ಯತೆ: ಯಡಿಯೂರಪ್ಪ

ಹಳೇಬೀಡಿನಲ್ಲಿ ಮುಖ್ಯಮಂತ್ರಿ ಹೇಳಿಕೆ
Last Updated 4 ಜನವರಿ 2020, 9:19 IST
ಅಕ್ಷರ ಗಾತ್ರ

ಹಾಸನ:ಮುಂದಿನ ವಾರದಿಂದ ಬಜೆಟ್ ಸಿದ್ಧತೆ ಆರಂಭಿಸಲಾಗುವುದು.ರಾಜ್ಯದ ರೈತರ ಹಿತ ಗಮನದಲ್ಲಿಟ್ಟುಕೊಂಡು ನೀರಾವರಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಹಳೆಬೀಡಿನಲ್ಲಿ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ‌ ಒತ್ತು ನೀಡಲು ತೀರ್ಮಾನಿಸಲಾಗಿದೆ. ರೈತರ ಉತ್ಪನ್ನಗಳಿಗೆ ಉತ್ತೇಜನ, ಉತ್ತಮ ಸೌಲಭ್ಯ ಸಿಗಬೇಕು. ಹೊಸ ಯೋಜನೆ ಘೋಷಣೆ ಬಗ್ಗೆ ತೀರ್ಮಾನ ಆಗಿಲ್ಲ. 2–3ದಿನದಲ್ಲಿ ಎಲ್ಲಾ ಇಲಾಖೆಗಳ ಪರಿಶೀಲನೆ ಆದ ಮೇಲೆ ಮುಂದಿನ‌ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ‌ ವೇಳೆ ನಮ್ಮ ಸಮಸ್ಯೆಗಳನ್ನುನ ಅವರ ಗಮನಕ್ಕೆ ತಂದಿದ್ದೇನೆ. ದೆಹಲಿಗೆ ಬಂದು ಎಲ್ಲಾ ಇಲಾಖೆಗೆ ಭೇಟಿ ನೀಡಿ ಎಂದು ಅವರು ಹೇಳಿದ್ದಾರೆ. ನಾಲ್ಕೈದು ದಿನಗಳಲ್ಲಿ ದೆಹಲಿಗೆ ಹೋಗುವೆ. ನೆರೆ ಪರಿಹಾರ ಮತ್ತು ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಚರ್ಚೆ ಮಾಡುವೆ ಎಂದು ಯಡಿಯೂರಪ್ಪ ಹೇಳಿದರು.

ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಸ್ವಾಮೀಜಿ ಹಾಗೂ ಶಾಸಕರ ಜೊತೆ ಚರ್ಚಿಸುವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT