ಹಳೇಬೀಡು: ಕಣ್ಣಿನ ಪೊರೆ ದೊಡ್ಡ ಕಾಯಿಲೆಯಲ್ಲ. ಭಯ ಪಡೆದೆ ಸೂಕ್ತ ಚಿಕಿತ್ಸೆ ಮಾಡಿಸಿಕೊಂಡರೆ, ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ.ನಾಗೇಶ್ ಆರಾಧ್ಯ ಹೇಳಿದರು.

ಆದಿಚುಂಚನಗಿರಿ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಹಾಗೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳ ಆಶ್ರಯದಲ್ಲಿ ಹಳೇಬೀಡಿನ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಬುಧವಾರ ನಡೆದ ನೇತ್ರ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘40 ವರ್ಷ ದಾಟಿದ ಬಳಿಕ ಜನರಲ್ಲಿ ಕಣ್ಣಿನ ಸಮಸ್ಯೆ ಬರುವುದು ಸಾಮಾನ್ಯ. ಸಾಕಷ್ಟು ಮಂದಿಗೆ ಪೊರೆ ಬರುವ ಸಾಧ್ಯತೆಯೂ ಇರುತ್ತದೆ. ಕಣ್ಣಿನಲ್ಲಿ ಪೊರೆ ಬರುವುದು ಪ್ರಾಣಾಪಾಯದ ಕಾಯಿಲೆಯಲ್ಲ. ಪೊರೆ ಬಂದವರನ್ನು ಚಿಕಿತ್ಸೆ ಮಾಡಿಸದೆ ಮನೆಯಲ್ಲಿ ಕೂರಿಸುವ ಪ್ರವೃತ್ತಿಯಿಂದ ಹೊರಬರಬೇಕು. ಶಸ್ತ್ರಚಿಕಿತ್ಸೆ ಮಾಡಿಸಿ ಅವರನ್ನು ಎಂದಿನಂತೆ ಚಟುವಟಿಕೆಯಲ್ಲಿ ತೊಡಗಿಸಬೇಕು’ ಎಂದು ನಾಗೇಶ್ ಹೇಳಿದರು.

‘ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ಅಕ್ಕಿ, ಬೆಳೆ ಹಾಗೂ ಕಾಳುಗಳನ್ನು ಶೋಧಿಸಲಾಗದೆ ಪರದಾಡುವ ಪ್ರಸಂಗ ಸಾಕಷ್ಟು ಕಂಡು ಬಂದಿದೆ. ಅಂಧತ್ವ ನಿವಾರಣಾ ಸಂಸ್ಥೆಯಿಂದ ಅಡುಗೆ ಸಿಬ್ಬಂದಿಗೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿದ್ದೇವೆ. ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಆಶಾ ಕಾರ್ಯಕರ್ತೆಯರು ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಧೈರ್ಯ ತುಂಬಿ ಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ಸೂಚನೆಗಳನ್ನು ನೀಡಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಶ್ಮಿ ವಿನಯ್ ಮಾತನಾಡಿದರು. 230 ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರು. 97 ಜನರನ್ನು ಮಂಡ್ಯ ಜಿಲ್ಲೆಯ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು.

ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಆರ್. ಅನಿಲ್ ಕುಮಾರ್, ವೈದ್ಯಾಧಿಕಾರಿಗಳಾದ ಡಾ.ಎ.ಎಸ್. ಚಂದನ್ ಕುಮಾರ್, ಡಾ.ಗಗನ್, ಡಾ.ದಿವ್ಯಾ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೈಲಜಾ, ನೇತ್ರ ವೈದ್ಯರಾದ ಡಾ. ಶ್ರಾವಣಿ, ಡಾ.ಕೀರ್ತಿ, ಡಾ. ಅನುಷಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಕ್ಕಿನ ಕುಮಾರ್ ಭಾಗವಹಿಸಿದ್ದರು. ಕಾವ್ಯಾಶ್ರೀ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.