ಹೊಳೆನರಸೀಪುರ: ಮಕ್ಕಳು ಚೆನ್ನಾಗಿ ಓದಿ ಹೆಚ್ಚು ಅಂಕಗಳಿಸಿದರೆ ಮಾತ್ರ ಬದುಕು ಸಾರ್ಥಕವಾಗದು, ಶಿಕ್ಷಣದ ಜೊತೆಗೆ, ಸಂಸ್ಕಾರ, ಆರೋಗ್ಯವೂ ಮುಖ್ಯವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಮಾರ್ಗದರ್ಶನ, ಸಹಕಾರ, ಸಲಹೆ, ನೀಡಬೇಕು’ ಎಂದು ಮಕ್ಕಳ ತಜ್ಞ ಡಾ. ಭುವನೇಶ್ ಸಲಹೆ ನೀಡಿದರು.

ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿರುವ ಲಿಟ್ಲ್ ಸ್ಟೆಪ್ಸ್ ಪ್ರೀ ಸ್ಕೂಲ್ ವತಿಯಿಂದ ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಂದೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮಲ್ಲಿ ಆಧುನಿಕತೆ ಬೆಳೆದಂತೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿದ್ದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಮಕ್ಕಳು ಊಟ ಮಾಡಲು ಹಠ ಮಾಡಿದರೆ ಮೊಬೈಲ್ ಕೊಡುತ್ತಾರೆ. 8 ವರ್ಷಗಳು ಕಳೆಯುವವರೆಗೂ ಮಕ್ಕಳಿಗೆ ಮೊಬೈಲ್ ನೀಡಲೇಬಾರದು. ಮೊಬೈಲ್ ನೀಡುವುದರಿಂದ ಮಕ್ಕಳ ಕಣ್ಣು ಮತ್ತು ಮಿದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದರು.

‘ಮಕ್ಕಳ ಆರೋಗ್ಯಕ್ಕೆ ಹೆಚ್ಚು ಪೌಷ್ಟಿಕಾಂಶ ಅಗತ್ಯವಿದ್ದು, ಹೆಚ್ಚು ಪೌಷ್ಟಿಕಾಂಶವುಳ್ಳ ಸೊಪ್ಪು, ತರಕಾರಿ, ಮೊಟ್ಟೆ, ಹಣ್ಣುಗಳಲ್ಲಿ ನೀಡಿ’ ಎಂದು ಸಲಹೆ ನೀಡಿದರು.

ಹಾಸನ ಕಲಾ ಮತ್ತು ವಾಣಿಜ್ಯ ಸ್ನಾತಕೋತರ ಕಾಲೇಜಿನ ಪ್ರಾಂಶುಪಾಲ ಎಂ.ಬಿ. ಇರ್ಷಾದ್ ಮಾತನಾಡಿ, ‘ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಸಂಸ್ಕಾರ ನೀಡಿ. ಮಕ್ಕಳು ಏನು ಮಾಡಬಾರದು ಎಂದು ಬಯಸುತ್ತೀರೋ ಅದನ್ನು ಮಕ್ಕಳ ಮುಂದೆ ಮಾಡಲೇಬಾರದು. ನೀವು ಮಕ್ಕಳ ಮುಂದೆ ಪುಸ್ತಕ ಓದುತ್ತಾ ಮಕ್ಕಳಿಗೂ ಓದಲು ಹೇಳಿ’ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಪ್ರಸನ್ನ, ಶಿಕ್ಷಣ ಇಲಾಖೆಯ ಚಂದ್ರಶೇಖರ್, ಶೈಲಜಾ, ಸುಜತ್ ಅಲಿ, ಸಂಸ್ಥೆಯ ಅಧ್ಯಕ್ಷ ಎಚ್.ಆರ್. ಕುಮಾರ್, ಕಾರ್ಯದರ್ಶಿ ನಾಗರಾಜ್, ಮುಖ್ಯ ಶಿಕ್ಷಕಿ, ನಾಗಲಕ್ಮೀ ಉಪಸ್ಥಿತರಿದ್ದರು.

ಬಿ.ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಅಶಿಫಾ ಫಾತಿಮಾ, ಆಶಿಫಾ ಬೇಗಂ ಸ್ವಾಗತಿಸಿ, ವಂದಿಸಿದರು. ಮಕ್ಕಳು ಬಣ್ಣ ಬಣ್ಣದ ಸಮವಸ್ತ್ರ ತೊಟ್ಟು ನೃತ್ಯ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.