ಸೋಮವಾರ, ಸೆಪ್ಟೆಂಬರ್ 16, 2019
27 °C

ಚಿರತೆಯಿಂದ ತಾಯಿ ಪಾರು ಮಾಡಿದ ಮಗ

Published:
Updated:
Prajavani

ಹಾಸನ: ಮಗನ ಸಮಯ ಪ್ರಜ್ಞೆಯಿಂದ ವೃದ್ಧೆಯೊಬ್ಬರು ಚಿರತೆ ದಾಳಿಯಿಂದ ಪಾರಾಗಿರುವ ಘಟನೆ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ಚಿಗಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿಂಗಮ್ಮ (70) ಎಂಬುವರು ಶನಿವಾರ ಬೆಳಗಿನ ಜಾವ 4.30 ರ ಸುಮಾರಿನಲ್ಲಿ ಬಹಿರ್ದೆಸೆಗೆಂದು ಮನೆಯಿಂದ ಹೊರ ಬಂದಿದ್ದರು. ಅದೇ ವೇಳೆ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಚಿರತೆ, ವೃದ್ಧೆ ಮೇಲೆ ದಾಳಿ ನಡೆಸಿದೆ. ಕೂಡಲೇ ನಿಂಗಮ್ಮ ಕೂಗಿ ಕೊಂಡಿದ್ದಾರೆ.

ತಾಯಿ ಚೀರಾಡುವ ಶಬ್ಧ ಕೇಳಿದ ಮಗ ಕುಮಾರ, ಮನೆಯೊಳಗಿಂದ ಓಡಿ ಬಂದಾಗ ಚಿರತೆ ಅಲ್ಲೇ ಇತ್ತು. ತಕ್ಷಣ ಉಪಾಯ ಮಾಡಿದ ಕುಮಾರ, ಪಂಚೆಯನ್ನು ಚಿರತೆ ಮೇಲೆ ಎಸೆದು ಸಾವಿನ ದವಡೆಯಿಂದ ತಾಯಿಯನ್ನು ಪಾರು ಮಾಡಿದ್ದಾನೆ. ನಿಂಗಮ್ಮ ಅವರ ಕೈ ಮತ್ತು ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

Post Comments (+)