ಸೋಮವಾರ, ಸೆಪ್ಟೆಂಬರ್ 20, 2021
29 °C

ಗೌಡರ ನಿವಾಸಕ್ಕೆ ಸಿಎಂ ಭೇಟಿ ಹಿಂದೆ ರಾಜಕೀಯ: ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಹಾಸನ: ರಾಜಕೀಯ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿರುವುದರಲ್ಲಿ ರಾಜಕೀಯ ಅಡಗಿದ್ದು, ಮುಂದಿನ ರಾಜಕೀಯ ಬೆಳವಣಿಗೆಗೆ ಸಹಕರಿಸಲು ಮನವಿ ಮಾಡಲು ಭೇಟಿ ಮಾಡಿದ್ದರು ಎಂದರು.

‘ಕೇವಲ ಸೌಜನ್ಯದ ಭೇಟಿ ಎಂದು ಹೇಳಿ ಬೊಮ್ಮಾಯಿ ಸಮರ್ಥಿಸಿ ಕೊಂಡಿರುವುದು ಸರಿಯಲ್ಲ. ಸೌಜನ್ಯದ  ಭೇಟಿಯಾಗಿದ್ದರೆ ಒಳ್ಳೆಯದು. ದೇವೇಗೌಡರ ಸಲಹೆಯಂತೆ ಉತ್ತಮ ಆಡಳಿತ ನೀಡಲಿ’ ಎಂದರು.

ಬಿಎಸ್‌ಪಿ ಶಾಸಕ ಎನ್. ಮಹೇಶ್ ಅವರು ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ಬಿಎಸ್ಪಿಯಿಂದ ಗೆದ್ದು ಈಗ ಅಧಿಕಾರಕ್ಕೆ ಏಕಾಏಕಿ ಬಿಜೆಪಿ ಸೇರುವುದು ಸರಿಯಲ್ಲ. ರಾಜೀನಾಮೆ ನೀಡಿ ನಂತರ ಸ್ಪರ್ಧಿಸಿ ಗೆಲ್ಲುವ ಮೂಲಕ ಸೇರುವುದು ಸೂಕ್ತ. ಇಷ್ಟು ವರ್ಷದ ಬಳಿಕ ಬಿಎಸ್ ಪಿ ಬಿಟ್ಟು ಈಗ ಬಿಜೆಪಿ ಸೇರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.