ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯಲ್ಲಿ ಮನೆಗಳಿಗೆ ತೆರಳಿ ತೆಂಗಿನ ಚಿಪ್ಪು ಖರೀದಿಸಲಾಗುತ್ತಿದೆ
ಹಾಸನವೂ ಸೇರಿದಂತೆ ರಾಜ್ಯದಲ್ಲಿ ತೆಂಗು ಬೆಳೆ ರೋಗಬಾಧೆ ಹೆಚ್ಚಾಗುತ್ತಿದ್ದು ತೆಂಗು ಇಳುವರಿ ಗಣನೀಯವಾಗಿ ಕುಂಠಿತವಾಗುತ್ತಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ
ಸಿ.ಎನ್. ಬಾಲಕೃಷ್ಣ ಶ್ರವಣಬೆಳಗೊಳ ಕ್ಷೇತ್ರದ ಶಾಸಕ
ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಗೋನಿಯೋಜಸ್ ಪರೋಪಜೀವಿ ಉತ್ಪಾದಿಸಿ ಉಚಿತವಾಗಿ ವಿತರಿಸಲು ₹ 50 ಲಕ್ಷ ಹೆಚ್ಚುವರಿ ಅನುದಾನ ನೀಡುವಂತೆ ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ.
ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವ
ಕುಸಿದ ಇಳುವರಿ: ಹೆಚ್ಚಿದ ಬೆಲೆ
ತೆಂಗಿಗೆ ವಿವಿಧ ರೋಗಗಳು ಕಾಡುತ್ತಿದ್ದು ಕಲ್ಪವೃಕ್ಷದ ಉತ್ಪಾದನೆ ಕುಸಿತವಾಗಿದೆ. ಇದರ ಪರಿಣಾಮವಾಗಿ ತೆಂಗಿನ ಉತ್ಪನ್ನಗಳ ಬೆಲೆ ಗಗನಕ್ಕೆ ಏರುತ್ತಿದೆ. ತೆಂಗಿನ ಕಾಯಿಗೆ ₹60 ರಿಂದ ₹75 ಬೆಲೆ ಇದ್ದು ಎಳನೀರಿಗೆ ₹60 ರಿಂದ ₹70 ಬೆಲೆ ಇದೆ. ಕೊಬ್ಬರಿಯ ಧಾರಣೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹25 ಸಾವಿರದಿಂದ ₹30ಸಾವಿರ ಇದ್ದರೆ ಒಂದು ತೆಂಗಿನ ಚಿಪ್ಪಿಗೆ ₹2.50ರಿಂದ ₹ 3 ಹಾಗೂ ಒಂದು ಸಾವಿರ ತೆಂಗಿನ ಸಿಪ್ಪೆಯ (ಮಟ್ಟೆ) ಬೆಲೆ ₹800 ರಿಂದ ₹ 1 ಸಾವಿರವರೆಗಿದೆ. ಹಾಸನ ಜಿಲ್ಲೆಯಲ್ಲಿ ಗುಜರಿ ಸಂಗ್ರಹಿಸುವ ಮಾದರಿಯಲ್ಲಿ ತೆಂಗಿನ ಚಿಪ್ಪು ನಾರನ್ನು ಖರೀದಿಸಲಾಗುತ್ತಿದೆ.