ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ನಾಲ್ಕು ದಿನ ಲಾಕ್‌ಡೌನ್‌ ಮುಂದುವರಿಕೆ

ಕಡಿಮೆಯಾಗದ ಸೋಂಕು, ಪ್ರಸ್ತುತ ಕೊರೊನಾ ಪಾಸಿಟಿವಿಟಿ ಶೇಕಡಾ 6: ಡಿ.ಸಿ
Last Updated 23 ಜೂನ್ 2021, 14:38 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಕಾರಣ ವಾರದಲ್ಲಿ ನಾಲ್ಕು ದಿನ ಲಾಕ್‌ಡೌನ್ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1ರವರೆಗೆ ಎಲ್ಲ ಅಂಗಡಿ ತೆರೆಯಲು ಅವಕಾಶನೀಡಲಾಗಿದೆ. ಉಳಿದ ದಿನ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿಇರುವುದರಿಂದ ಸಾರ್ವಜನಿಕರು ಸಹಕರಿಸಬೇಕು. ಪ್ರಸ್ತುತ ಪಾಸಿಟಿವಿಟಿ ದರ ಶೇಕಡಾ 6ರಷ್ಟು ಇದೆ ಸರ್ಕಾರದ ನಿರ್ದೇಶನದಂತೆ ನಿತ್ಯ 6 ಸಾವಿರಕ್ಕೂ ಹೆಚ್ಚು ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. 37 ಸಿಸಿ ಕೇಂದ್ರಗಳಲ್ಲಿ 1,500 ಸೋಂಕಿತರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಪಾಸಿಟಿವಿಟಿ ಹೆಚ್ಚಿರುವ ನಾಲ್ಕು ತಾಲ್ಲೂಕುಗಳಲ್ಲಿ ಕಡೆ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನ ನಡೆಯುತ್ತಿದೆ.ಸೋಂಕು ಹೆಚ್ಚಿರುವ ಬೇಲೂರು, ಅರಕಲಗೂಡುತಾಲ್ಲೂಕಿನಲ್ಲಿ ಕೋವಿಡ್‌ ಪರೀಕ್ಷೆಹೆಚ್ಚು ಮಾಡಲಾಗುತ್ತಿದೆ ಎರಡನೇ ಅಲೆಯಲ್ಲಿ 18 ವರ್ಷದೊಳಗಿನ 7,400 ಮಕ್ಕಳಿಗೆ ಸೋಂಕು ತಗುಲಿತ್ತು.ಈ ಪೈಕಿ 11 ವರ್ಷದೊಳಗಿನ ಮಕ್ಕಳ ಸಂಖ್ಯೆ 4 ಸಾವಿರ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ4,612. ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದರು.

ಜಿಲ್ಲೆಯಲ್ಲಿ 21ರಿಂದ ಲಸಿಕಾ ಆಂದೋಲನಾ ಆರಂಭಗೊಂಡಿದ್ದು, 34 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಬುಧವಾರ ಸಹ ಹತ್ತು ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಬೇಡಿಕೆ ತಕ್ಕಂತೆಲಸಿಕೆ ಪೂರೈಕೆ ಆಗುತ್ತಿದ್ದು, ಸಾರ್ವಜನಿಕರು ಗಾಬರಿ ಪಡುವ ಅಗತ್ಯವಿಲ್ಲ. ಮೂರನೇ ಅಲೆಯಿಂದಸುರಕ್ಷಿತವಾಗಿರಲು ಎರಡು ಡೋಸ್‌ ಪಡೆಯಬೇಕು ಎಂದು ವಿವರಿಸಿದರು.

ತೀವ್ರ ಅಪೌಷ್ಟಿಕತೆ ಇರುವ ಮಕ್ಕಳ ಸರ್ವೆ ಕಾರ್ಯ ಮತ್ತೊಮ್ಮೆ ನಡೆಯುತ್ತಿದೆ. ಶಾಲಾ, ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇ ಲ್ಲ. ಖಾಲಿ ಹುದ್ದೆಗಳು ಭರ್ತಿಯಾಗಿದೆ. ಹಿಮ್ಸ್‌ನಲ್ಲಿ ನೂರು ಹಾಸಿಗೆಗಳ ಮಕ್ಕಳ ವಾರ್ಡ್‌ ತೆರೆಯಲಾಗುವುದು. ಮಕ್ಕಳ ತಜ್ಞರ ಲಭ್ಯತೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT