ಹಳೇಬೀಡು: ಒಂದು ಕಾಲದಲ್ಲಿ ಕಡಿಮೆ ವೆಚ್ಚದ ಸುಲಭದ ಕೃಷಿ ಎಂದು ಹೇಳುತ್ತಿದ್ದ ಮುಸುಕಿನ ಜೋಳದ ಬೆಳೆಗೆ ಬಿಳಿಸುಳಿ ಕೇದಿಗೆ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣ ಸವಾಲಾಗಿದ್ದು, ರೈತರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.

ರೋಗ ಗಿಡದಿಂದ ಗಿಡಕ್ಕೆ ಶರವೇಗದಲ್ಲಿ ಹರಡುತ್ತಿದೆ. ಹೊಲವನ್ನು ಸಂಪೂರ್ಣ ಆವರಿಸುತ್ತಿರುವ ರೋಗ ನಿಯಂತ್ರಣ ಮಾಡಲು ಸಾಧ್ಯವಾಗದೇ ರೈತರು ಕೈಕಟ್ಟಿ ಕುಳಿತಿದ್ದಾರೆ. ಜೋಳ ಬಿತ್ತನೆಗೆ ಹಾಕಿದ ಬಂಡವಾಳ ರೈತರ ಕೈಗೆ ಸಿಗದಂತಾಗಿದೆ.

ಬಿತ್ತನೆ ಮಾಡಿದ ಜೋಳ ಮೊಳಕೆ ಒಡೆದು 20 ರಿಂದ 25 ದಿನಕ್ಕೆ ಗರಿಗಳಿಗೆ ಶೀಲಿಂಧ್ರ ಆವರಿಸುತ್ತಿದೆ. ನಂತರ ಗಿಡದ ಸುಳಿ, ಬಿಳಿ ಬಣ್ಣಕ್ಕೆ ತಿರುಗಿ ಸ್ವಲ್ಪ ದಿನದಲ್ಲಿಯೇ ಕಂದು ಬಣ್ಣಕ್ಕೆ ತಿರುಗುತ್ತಿದೆ. ಕಾಲಕ್ರಮೇಣ ಗಿಡ ಕೊಳೆತು ಹೋಗುತ್ತಿದೆ. ರೋಗ ಬೇಗ ಹರಡುತ್ತಿದ್ದು, ಹೊಲದಿಂದ ಹೊಲಕ್ಕೆ ಪಸರಿಸುತ್ತಿದೆ. ಹೀಗಾಗಿ ಮುಸುಕಿನ ಜೋಳದ ಬೆಳೆ ಸಂಪೂರ್ಣ ರೋಗಮಯವಾಗಿದೆ ಎಂದು ರೈತ ರಾಜಗೆರೆ ಭೈರೇಶ್ ತಿಳಿಸಿದರು.

ಮುಸುಕಿನ ಜೋಳದ ಬೆಳೆಗೆ ಹಿಂದೆ ರೋಗ ಹರಡುತ್ತಿರಲಿಲ್ಲ. ಬೆಳೆಗೆ ಔಷಧ ಸಿಂಪಡಣೆ ಮಾಡುವ ಪದ್ಧತಿ ಇರಲಿಲ್ಲ. ಐದಾರು ವರ್ಷದಿಂದ ಕೀಟ ಹಾಗೂ ರೋಗ ಬಾಧೆ ಬೆಳೆಯನ್ನು ಬೆನ್ನು ಬಿಡದಂತೆ ಕಾಡುತ್ತಿದೆ. ಈ ವರ್ಷ ಬೆಳೆ ಎಚ್ಚೆತ್ತುಕೊಳ್ಳದಂತೆ ರೋಗ ಆವರಿಸಿದೆ.

ಜಾನುವಾರು ಮೇವಿಗೂ ಉಪಯೋಗವಿಲ್ಲ: ರೋಗ ಆವರಿಸಿದ ನಂತರ ಗಿಡ ಬೆಳವಣಿಗೆ ಆಗದೆ ಕುಂಠಿತವಾಗುತ್ತಿದೆ. ಜೋಳದ ಬೆಳೆಯಿಂದ ಫಸಲು ಸಿಗದಿದ್ದರೂ ಚಿಂತೆ ಮಾಡುತ್ತಿರಲಿಲ್ಲ. ದೃಢವಾಗಿ ಬೆಳೆಯದೇ ಸೊರಗುತ್ತಿರುವ ಜೋಳದ ಗಿಡಗಳನ್ನು ಜಾನುವಾರು ಮೇವಿಗೂ ಬಳಕೆ ಮಾಡಲು ಸಾಧ್ಯ ಇಲ್ಲದಂತಾಗಿದೆ ಎಂದು ರೈತರು ಹೇಳುತ್ತಿದ್ದಾರೆ.

ಹೊಲಕ್ಕೆ ದನ, ಕರು ಬಿಟ್ಟರೂ ಮೇಯುತ್ತಿಲ್ಲ. ಸೊರಗಿರುವ ಗಿಡಗಳು ಅರ್ಧ ಅಡಿಗಿಂತ ಹೆಚ್ಚು ಬೆಳೆಯದೇ ಇರುವುದರಿಂದ ದನ, ಕರುಗಳಿಗೆ ಮೇವಾಗಿ ಒದಗಿಸುವುದಕ್ಕೂ ಸಾಧ್ಯವಿಲ್ಲ. ರೋಗದ ಮುಸುಕಿನ ಜೋಳ ಸೇವಿಸಿದರೆ ಜಾನುವಾರು ಆರೋಗ್ಯದ ಮೇಲೆ ದುಷ್ಪಾರಿಣಾಮ ಆಗಬಹುದು ಎಂದು ರೈತ ದೇವರಾಜು ಅಳಲು ತೋಡಿಕೊಂಡರು.

ಬೇರೆ ಬೆಳೆ ಮಾಡುವುದು ಕಷ್ಟ: ಬೆಳೆ ನಾಶ ಮಾಡಿ ಬೇರೆ ಬೆಳೆ ಮಾಡುವುದಕ್ಕೆ ಬಂಡವಾಳ ಇಲ್ಲದಂತಾಗಿದೆ. ಬೆಳೆ ನಾಶಮಾಡಿ ಬೇರೆ ಬೆಳೆ ಮಾಡಿದರೆ, ಮಣ್ಣಿನಿಂದ ಮುಂದಿನ ಬೆಳೆಗೆ ರೋಗ ಹರಡಿದರೆ ಎಂಬ ಚಿಂತೆ ಕಾಡುತ್ತಿದೆ. ಮೋಡ ಕವಿದ ವಾತಾವರಣ, ಆಗಾಗ್ಗೆ ಉದುರುವ ತುಂತುರು ಮಳೆಯಿಂದ ಬೇರೆ ಬೆಳೆ ಮಾಡುವುದಕ್ಕೆ ಪೂರಕ ವಾತಾವರಣ ಇಲ್ಲದಂತಾಗಿದೆ ಎಂದು ರೈತ ಗಂಗಾಧರ ಹೇಳಿದರು.

ಬಿತ್ತನೆ ಮಾಡಿದ 20 ರಿಂದ25 ದಿನಕ್ಕೆ ಹರಡುತ್ತಿರುವ ಶಿಲೀಂಧ್ರ ಜಾನುವಾರು ಮೇವಿಗೂ ಉಪಯೋಗ ಇಲ್ಲದಂತಾದ ಸೊರಗಿದ ಬೆಳೆ ಬೇಲೂರು ತಾಲ್ಲೂಕಿನಲ್ಲಿ 11ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ

ಮುಸುಕಿನಜೋಳ ನಂಬಿಕೊಂಡು ಹೊಟ್ಟೆಗೆ ಹಿಟ್ಟು ಇಲ್ಲದಂತಾಗಿದೆ. ಜೋಳ ಬೆಳೆದಿರುವ ರೈತರನ್ನು ಸರ್ಕಾರ ಕೈಹಿಡಿಯಬೇಕಾಗಿದೆ.
ಭೈರೇಶ ರಾಜಗೆರೆ ರೈತ

ಪೂರ್ವ ಮುಂಗಾರಿನಲ್ಲಿ ಮಳೆ ಹೆಚ್ಚಾಗಿದ್ದರಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಜಮೀನಿನಲ್ಲಿ ನಿಂತ ನೀರನ್ನು ಬಸಿದು ಭೂಮಿ ಒಣಗಲು ಬಿಡಬೇಕು.
ತೇಜಸ್ ಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಬೀಜೋಪಚಾರದಿಂದ ಅನುಕೂಲ ಬೇಲೂರು ತಾಲ್ಲೂಕಿನಲ್ಲಿ ಅಂದಾಜು 11ಸಾವಿ ಹೆಕ್ಟೇರ್ನಲ್ಲಿ ಮುಸುಕಿನ ಜೋಳದ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡುವ ಮೊದಲು ಬೀಜಕ್ಕೆ ಮೆಟಾಲೆಕ್ಸಿಲ್ ಡ್ಲುಪಿ ಹಾಗೂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಬೇಕು. ಬಿತ್ತನೆ ಮಾಡಿದ 20 ರಿಂದ 25 ದಿನಕ್ಕೆ ಔಷಧ ಸಿಂಪಡಣೆ ಮಾಡಬೇಕು. ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಔಷಧ ಪೂರೈಕೆ ಮಾಡಲಾಗುತ್ತಿದೆ ಸಹಾಯಕ ಕೃಷಿ ನಿರ್ದೇಶಕ ತೇಜಸ್ ಕುಮಾರ್ ಹೇಳಿದರು. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ಬೆಳೆಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ರೈತರು ತಮ್ಮ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.