ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: 1,448 ಮಂದಿಗೆ ಕೋವಿಡ್‌

Last Updated 21 ಮೇ 2021, 13:27 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಮರಣ ಪ್ರಮಾಣ ದರ ಕೊಂಚ ತಗ್ಗಿದೆ.

ಹೊಸದಾಗಿ ಶುಕ್ರವಾರ 1448 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ 8 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 70309ಕ್ಕೆ ಏರಿಕೆಯಾಗಿದ್ದು, 190 ಮಂದಿ ಸೇರಿದಂತೆ ಒಟ್ಟಾರೆ 55035 ಮಂದಿ ಗುಣಮುಖರಾಗಿದ್ದಾರೆ.

ಕಾಯಿಲೆಯಿಂದ ಈವರೆಗೆ 891 ಮಂದಿ ಮೃತಪಟ್ಟಿದ್ದಾರೆ. 14,375 ಸಕ್ರಿಯ ಪ್ರಕರಣಗಳ ಪೈಕಿ 130 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಆಲೂರು ತಾಲ್ಲೂಕಿನ 57, ಅರಕಲಗೂಡು 119, ಅರಸೀಕೆರೆ 195, ಬೇಲೂರು 235, ಚನ್ನರಾಯಪಟ್ಟಣ 150, ಹಾಸನ 476, ಹೊಳೆನರಸೀಪುರ 98, ಸಕಲೇಶಪುರ 117 ಹಾಗೂ ಇತರೆ ಜಿಲ್ಲೆಯ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.ಹಾಸನ ತಾಲ್ಲೂಕಿನ 3, ಹೊಳೆನರಸೀಪುರದ ಇಬ್ಬರು, ಸಕಲೇಶಪುರ, ಚನ್ನರಾಯಪಟ್ಟಣ ಹಾಗೂ ಅರಸೀಕೆರೆಯ ತಲಾ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT