ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವರ್‌ ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾವಹಿಸಿ

ಕೋವಿಡ್‌ ಚಿಕಿತ್ಸಾ ಬೆಡ್‌ಗಳ ಹೆಚ್ಚಳಕ್ಕೆ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚನೆ
Last Updated 23 ಏಪ್ರಿಲ್ 2021, 15:38 IST
ಅಕ್ಷರ ಗಾತ್ರ

ಹಾಸನ: ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಆಮ್ಲಜನಕ ಪೂರೈಕೆಯುಕ್ತ ಹಾಸಿಗೆಗಳ ಪ್ರಮಾಣ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಈ ಬಗ್ಗೆ ತುರ್ತಾಗಿ ಕ್ರಮ ವಹಿಸುವಂತೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರುಹಿಮ್ಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ನಿಯಂತ್ರಣ ಕ್ರಮದ ಕುರಿತು ಅಧಿಕಾರಿಗಳೊಂದಿಗೆತುರ್ತು ಸಭೆ ನಡೆಸಿದ ಅವರು, ಹಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹಾಲಿ ಇರುವ 400 ಬೆಡ್‍ಗಳ ಜೊತೆಗೆ ಇನ್ನೂಕನಿಷ್ಠ 150 ಹಾಸಿಗೆಗಳನ್ನು ಹೆಚ್ಚಿಸುವಂತೆ ಮತ್ತು ಅವುಗಳಿಗೂ ಆಮ್ಲಜನಕ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕುಎಂದು ನಿರ್ದೇಶನ ನೀಡಿದರು.

ತಾಲ್ಲೂಕುಗಳಲ್ಲಿಯೂ ಚಿಕಿತ್ಸಾ ಸೌಲಭ್ಯ ಹೆಚ್ಚಿಸುವ ಅಗತ್ಯವಿದೆ. ಆಮ್ಲಜನಕ ಪೂರೈಕೆಯ ಪೈಪ್‌ಲೈನ್ ಅಳವಡಿಕೆಯಾಗಿದ್ದು,ಉತ್ತಮ ಸೌಲಭ್ಯಗಳಿರುವ ಶಾಂತಿಗ್ರಾಮ, ಮೊಸಳೆ ಹೊಸಳ್ಳಿ, ಅರೇಹಳ್ಳಿ, ಉದಯಪುರ, ಜೆ.ಸಿ.ಪುರ ಆಸ್ಪತ್ರೆಗಳನ್ನು ತಕ್ಷಣಕೋವಿಡ್ ಚಿಕಿತ್ಸೆಗೆ ಸಿದ್ಧಪಡಿಸಿ, ಅದಕ್ಕೆ ಹೆಚ್ಚುವರಿ ಮಂಚ ಹಾಗೂ ಇತರೆ ಸೌಲಭ್ಯಗಳನ್ನು ಸರ್ಕಾರದ ವತಿಯಿಂದಒದಗಿಸಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳು ಮುಂದಿನ ದಿನಗಳಲ್ಲಿ ಶೇಕಡಾ 80ರಷ್ಟು ಹಾಸಿಗೆಗಳನ್ನು ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಕ್ಕೆಒದಗಿಸಬೇಕು. ಸದ್ಯಕ್ಕೆ ಶೇಕಡಾ 50ರಷ್ಟು ಹಾಸಿಗೆ ಕಾಯ್ದಿರಿಸಿ, ಹಿಮ್ಸ್‌ನಲ್ಲಿ ಭರ್ತಿಯಾಗುತ್ತಿದ್ದಂತೆ ಸರ್ಕಾರದ ವತಿಯಿಂದಚಿಕಿತ್ಸೆಗೆಗಾಗಿ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ಸೂಚನೆ ನೀಡಿದರು.

ಆಮ್ಲಜನಕ ಪೂರೈಕೆ ಇರುವ ಬೆಡ್‍ಗಳ ಸಂಖ್ಯೆ ಹೆಚ್ಚಿಸಿದಷ್ಟು ಸೋಂಕಿತರನ್ನು ಉಳಿಸಿಕೊಳ್ಳುವ ಅವಶ್ಯಕತೆಅಧಿಕವಾಗುತ್ತಿದೆ. ಅಲ್ಲದೇ ತುರ್ತು ಅನಿವಾರ್ಯತೆಗಳಿಲ್ಲದ ಸೋಂಕಿತರನ್ನು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿದಾಖಲಿಸಿಕೊಳ್ಳದೆ, ಇತರೆ ರೂಪದಲ್ಲಿ ಚಿಕಿತ್ಸೆ ಒದಗಿಸಬೇಕು ಎಂದು ಹೇಳಿದರು.

ಹಾಲಿ ಕೋವಿಡ್ ಆರೈಕೆ ಕೇಂದ್ರವಾಗಿರುವ ನಗರದ ಆಯುಷ್ ಆಸ್ಪತ್ರೆಗೆ ಆಮ್ಲಜನಕ ಪೈಪ್‌ಲೈನ್‌ ಮಾಡಿ, ಕೋವಿಡ್ಚಿಕಿತ್ಸೆಗೆ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಜಿಲ್ಲೆಯಲ್ಲಿನ ಈವರೆಗಿನ ಕೋವಿಡ್ ಸ್ಥಿತಿಗತಿ, ಹಾಲಿ ಇರುವ ಬೆಡ್‍ ಸೌಲಭ್ಯ, ಔಷಧಲಭ್ಯತೆ, ಮುಂದಿನ ಸಾಧ್ಯತೆ ಹಾಗೂ ಆದ್ಯತೆ ಬಗ್ಗೆ ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಹಿಮ್ಸ್ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಕೃಷ್ಣಮೂರ್ತಿ ಅವರು ಕೋವಿಡ್ ಚಿಕಿತ್ಸಾ ವ್ಯವಸ್ಥೆ ನಿರ್ವಹಣೆ ಬಗ್ಗೆ ಬೇಕಿರುವ ಸೌಲಭ್ಯಗಳ ಬಗ್ಗೆಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಡ್‍ಗಳ ಸಂಖ್ಯೆ ಹೆಚ್ಚಿಸಿದಂತೆ ವೈದ್ಯರು, ಶುಶ್ರೂಷಕರು, ಸಹಾಯಕರ ಅಗತ್ಯ ಬೀಳುತ್ತದೆ. ಅಲ್ಲದೇ ಆಮ್ಲಜನಕ ಪೂರೈಕೆಗೆಇನ್ನೊಂದು 13000 ಕೆ.ಎಂ ಟ್ಯಾಂಕ್ ಅಳವಡಿಕೆ ಅನಿವಾರ್ಯವಾಗಿದೆ. ಹೊಸ ಪೈಪ್ ಲೈನ್ ಅಳವಡಿಕೆಗಾಗಿಯೂ ಅನುದಾನಅವಶ್ಯಕವಾಗಿದೆ ಎಂದರು.

ರೆಮ್‍ಡಿಸಿವರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾವಹಿಸಬೇಕು. ದೈನಂದಿನ ಕರ್ಫ್ಯೂ ಹಾಗೂ ವಾರಂತ್ಯದ ಕರ್ಫ್ಯೂ ಅನುಷ್ಠಾನ ಸಮರ್ಪಕವಾಗಿ ಮಾಡಬೇಕು. ಜನರು ಇದಕ್ಕೆ ಸಹಕರಿಸಬೇಕು ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್‌, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿ, ಸದ್ಯಕ್ಕೆ ತುರ್ತಾಗಿ ಪ್ರತಿ ತಾಲ್ಲೂಕಿಗೆ ₹25 ಲಕ್ಷ ಕುಡಿವ ನೀರು ಪೂರೈಕೆಗೆ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ಚುವರಿ ಅನುದಾನ ಬೇಕಾಗುತ್ತದೆ, ಅದಕ್ಕೆ ಯೋಜನೆ ರೂಪಿಸಿ ಬೇಡಿಕೆ ಸಲ್ಲಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT