ಸೋಮವಾರ, ಜೂನ್ 14, 2021
21 °C
127 ಜನರಿಗೆ ಕೊರೊನಾ ಪಾಸಿಟವ್‌, ಸೋಂಕಿತ ಸಂಖ್ಯೆ 3158

ಕೋವಿಡ್‌: ಒಂದೇ ದಿನ 9 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕೋವಿಡ್‌ಗೆ ಕಾಯಿಲೆಗೆ ತುತ್ತಾಗಿದ್ದ ಜಿಲ್ಲೆಯ 9 ಜನರು ಶುಕ್ರವಾರ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅರಸೀಕೆರೆ ತಾಲ್ಲೂಕಿನ 65 ವರ್ಷದ ವೃದ್ಧ, 45 ವರ್ಷದ ವ್ಯಕ್ತಿ, 58 ವರ್ಷದ ಪುರುಷ ಹಾಗೂ ಹೊಳೆನರಸೀಪುರ ತಾಲ್ಲೂಕಿನ 54 ವರ್ಷದ ಮಹಿಳೆ ಹಿಮ್ಸ್‌ನಲ್ಲಿ ದಾಖಲಾಗಿದ್ದರು. ಹಾಸನ ತಾಲ್ಲೂಕಿನ 73 ವರ್ಷ, 60 ವರ್ಷ, 58 ವರ್ಷದ ಪುರುಷ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 75 ವರ್ಷದ ಪುರುಷ ಉಸಿರಾಟದ ಸಮಸ್ಯೆಯಿಂದ ಹಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರೆಲ್ಲರಿಗೂ ಕೋವಿಡ್‌ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹೊಸದಾಗಿ 127 ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3158 ಕ್ಕೆ ಏರಿಕೆಯಾಗಿದೆ.
ಈವರೆಗೆ 1247 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸತೀಶ್‌ ತಿಳಿಸಿದರು.

ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಮೂವರು ಯುವಕರು, ಶೀತ, ಕೆಮ್ಮು, ಜ್ವರ ಲಕ್ಷಣ ಇದ್ದ ಅರಕಲಗೂಡು ತಾಲ್ಲೂಕಿನ 46 ವರ್ಷದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿದೆ. ಬಹುತೇಕ ಪ್ರಕರಣಗಳು ಸೋಂಕಿತ ವ್ಯಕ್ತಿಯ ಪ್ರಾಥಮಿಕ
ಸಂಪರ್ಕದಿಂದ ಹಾಗೂ ಕೆಮ್ಮು, ಜ್ವರ ಲಕ್ಷಣ ಇರುವವರಿಗೆ ಕೋವಿಡ್‌ ಪತ್ತೆಯಾಗಿದೆ ಎಂದು ಹೇಳಿದರು.

1823 ಸಕ್ರಿಯ ಪ್ರಕರಣಗಳಿವೆ. ಇವರಿಗೆ ಕೋವಿಡ್ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 47 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 23 ಜನರು ಶುಕ್ರವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ .

ಹೊಸದಾಗಿ ಅರಸೀಕೆರೆ 8, ಚನ್ನರಾಯಪಟ್ಟಣ 10, ಆಲೂರು 2, ಹಾಸನ 65, ಹೊಳೆನರಸೀಪುರ 11, ನ ಅರಕಲಗೂಡು 14, ಬೇಲೂರು 12 ಹಾಗೂ ಸಕಲೇಶಪುರ ತಾಲ್ಲೂಕಿನ 5 ಜನರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.