ಹಾಸನ: ನಗರದ ಅರಳೀಕಟ್ಟೆ ವೃತ್ತದಲ್ಲಿ ಶನಿವಾರ ರಾತ್ರಿ ನಾಲ್ವರು ದುಷ್ಕರ್ಮಿಗಳ ತಂಡ ಯುವಕನನ್ನು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದೆ.

ನಗರದ ರಂಗೋಲಿ ಹಳ್ಳಿ ನಿವಾಸಿ ರಘುಗೌಡ ಮೃತ ಯುವಕ. ಅರಳೀಕಟ್ಟೆ ವೃತ್ತದ ಟೀ ಅಂಗಡಿ ಬಳಿ ನಿಂತಿದ್ದ ರಘು ಮೇಲೆ ಬೈಕ್ನಲ್ಲಿ ಬಂದ ರಂಗೋಲಿ ಹಳ್ಳ ನಿವಾಸಿಗಳಾದ ಭವಿತ, ತೇಜಸ್ ಹಾಗೂ ಮತ್ತಿಬ್ಬರು ಬಂದು ಏಕಾಏಕಿ ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಅಂಗಡಿಯೊಂದಕ್ಕೆ ನುಗ್ಗಿದರೂ ಬಿಡದೆ ಅಟ್ಟಾಡಿಸಿಕೊಂಡು ಹೋಗಿ ಕಣ್ಣಿಗೆ ಖಾರದ ಪುಡಿ ಎರಚಿ, ಕೊಚ್ಚಿ ಪರಾರಿಯಾಗಿದ್ದಾರೆ.ರಘುವಿನ ಕೈ ಬೆರಳು ತುಂಡಾಗಿ ಬಿದ್ದಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ನಗರ ವೃತ್ತದ ಸಿಪಿಐ ಕೃಷ್ಣರಾಜು ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.